Prema Jala ( love is blind) book and story is written by Narayan M in Kannada . This story is getting good reader response on Matrubharti app and web since it is published free to read for all readers online. Prema Jala ( love is blind) is also popular in Horror Stories in Kannada and it is receiving from online readers very fast. Signup now to get access to this story.
ಪ್ರೇಮ ಜಾಲ (love is blind) - Novels
Narayan M
by
Kannada Horror Stories
ಗಾಢ ಕಗ್ಗತ್ತಲೆಯ ಅಂಧಕಾರ… ಭಯ ಹುಟ್ಟಿಸುವ ನಿಶ್ಶಬ್ದ ವಾತಾವರಣ ಮೌನದ ಅಧಿಪತ್ಯವನ್ನು ದಾಟಿ, ಕತ್ತಲಿನಲ್ಲಿ ಸಾಗುತ್ತಿರುವಳು ಒಬ್ಬಂಟಿಯಾಗಿ ಅವಳು… ಸುತ್ತಮುತ್ತಲೂ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಮರದ ಛಾಯೆ ದೈತ್ಯಾಕಾರವಾಗಿ ಬೆಳೆಯುತ್ತಾ ಅವಳನ್ನು ನುಂಗುವಂತೆ ಕಾಣಿಸುತ್ತಿತ್ತು…ಆಕಾಶದಲ್ಲಿ ಪೂರ್ಣಚಂದ್ರನ ಆಗಮನವಾಗಿದ್ದರೂ ಕೂಡ, ಅವಳು ನಡೆಯುತ್ತಿದ್ದ ಹಾದಿಯಲ್ಲಿ ಪೂರ್ಣಚಂದ್ರ ತನ್ನ ಬೆಳದಿಂಗಳನ್ನು ನೀಡುವಲ್ಲಿ ವಿಫಲನಾಗಿದ್ದ…ಸಾಗುತ್ತಿರುವ ಅವಳ ಹಾದಿಯಲ್ಲಿ ಅಡೆತಡೆಗಳು ನೂರಾರು… ಎಲ್ಲವನ್ನೂ ದಾಟಿ ಸುಮ್ಮನೆ ನಡೆಯುತ್ತಿದ್ದಾಳೆ.... ಅಲ್ಲಿನ ಮೌನ — ಅದೆಷ್ಟು ಭಯ ಹುಟ್ಟಿಸುತ್ತದೆ! ನಿಶ್ಶಬ್ದತೆ ಮನಸ್ಸಿನ ಘರ್ಷಣೆಗೆ ಸೂಕ್ತ ಪರಿಹಾರವಾದರೆ, ಅದೇ ಮೌನ ಭಾವನೆಗಳನ್ನು ಸೋಲಿಸುವುದರಲ್ಲಿ ಮೇಲುಗೈ... ಕೆಲವೊಮ್ಮೆ ಅದೇ ಮೌನ ಭಯದ ತೀವ್ರತೆಯನ್ನು ತೋರಿಸಿದರೆ ಮತ್ತೊಮ್ಮೆ ಅದೇ ಮೌನ ಸಾವಿರ ಮಾತಿಗೆ ಒಂದೇ ಅರ್ಥ ನೀಡುತ್ತದೆ..ಸಾಗುತ್ತಿರುವ ಅವಳ ಮುಖದಲ್ಲಿ ಇದ್ದದ್ದು ಕೇವಲ ನಿರ್ಲಿಪ್ತತೆ… ತನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಂತಹ ನಿರ್ಲಿಪ್ತತೆ. “ಯಾರೂ ಇಲ್ಲ” ಅನ್ನುವ ಭಾವನೆ ಅವಳನ್ನು ಅತಿ ಹೆಚ್ಚು ಕಾಡುತ್ತಿತ್ತು. ಹಾಗಂತ ಅವಳ ಮನಸ್ಸು ಒಪ್ಪಿಕೊಳ್ಳಲು ಇಷ್ಟಪಡುತ್ತಿರಲಿಲ್ಲ — ಬುದ್ಧಿ ಹೇಳುತ್ತಿತ್ತು
ಗಾಢ ಕಗ್ಗತ್ತಲೆಯ ಅಂಧಕಾರ… ಭಯ ಹುಟ್ಟಿಸುವ ನಿಶ್ಶಬ್ದ ವಾತಾವರಣ ಮೌನದ ಅಧಿಪತ್ಯವನ್ನು ದಾಟಿ, ಕತ್ತಲಿನಲ್ಲಿ ಸಾಗುತ್ತಿರುವಳು ಒಬ್ಬಂಟಿಯಾಗಿ ಅವಳು… ಸುತ್ತಮುತ್ತಲೂ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಮರದ ಛಾಯೆ ದೈತ್ಯಾಕಾರವಾಗಿ ಬೆಳೆಯುತ್ತಾ ಅವಳನ್ನು ನುಂಗುವಂತೆ ಕಾಣಿಸುತ್ತಿತ್ತು…ಆಕಾಶದಲ್ಲಿ ಪೂರ್ಣಚಂದ್ರನ ಆಗಮನವಾಗಿದ್ದರೂ ಕೂಡ, ಅವಳು ನಡೆಯುತ್ತಿದ್ದ ಹಾದಿಯಲ್ಲಿ ಪೂರ್ಣಚಂದ್ರ ತನ್ನ ಬೆಳದಿಂಗಳನ್ನು ನೀಡುವಲ್ಲಿ ವಿಫಲನಾಗಿದ್ದ…ಸಾಗುತ್ತಿರುವ ಅವಳ ಹಾದಿಯಲ್ಲಿ ಅಡೆತಡೆಗಳು ...Read Moreಎಲ್ಲವನ್ನೂ ದಾಟಿ ಸುಮ್ಮನೆ ನಡೆಯುತ್ತಿದ್ದಾಳೆ.... ಅಲ್ಲಿನ ಮೌನ — ಅದೆಷ್ಟು ಭಯ ಹುಟ್ಟಿಸುತ್ತದೆ! ನಿಶ್ಶಬ್ದತೆ ಮನಸ್ಸಿನ ಘರ್ಷಣೆಗೆ ಸೂಕ್ತ ಪರಿಹಾರವಾದರೆ, ಅದೇ ಮೌನ ಭಾವನೆಗಳನ್ನು ಸೋಲಿಸುವುದರಲ್ಲಿ ಮೇಲುಗೈ... ಕೆಲವೊಮ್ಮೆ ಅದೇ ಮೌನ ಭಯದ ತೀವ್ರತೆಯನ್ನು ತೋರಿಸಿದರೆ ಮತ್ತೊಮ್ಮೆ ಅದೇ ಮೌನ ಸಾವಿರ ಮಾತಿಗೆ ಒಂದೇ ಅರ್ಥ ನೀಡುತ್ತದೆ..ಸಾಗುತ್ತಿರುವ ಅವಳ ಮುಖದಲ್ಲಿ ಇದ್ದದ್ದು ಕೇವಲ ನಿರ್ಲಿಪ್ತತೆ… ತನ್ನ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಂತಹ ನಿರ್ಲಿಪ್ತತೆ. “ಯಾರೂ ಇಲ್ಲ” ಅನ್ನುವ ಭಾವನೆ ಅವಳನ್ನು ಅತಿ ಹೆಚ್ಚು ಕಾಡುತ್ತಿತ್ತು. ಹಾಗಂತ ಅವಳ ಮನಸ್ಸು ಒಪ್ಪಿಕೊಳ್ಳಲು ಇಷ್ಟಪಡುತ್ತಿರಲಿಲ್ಲ — ಬುದ್ಧಿ ಹೇಳುತ್ತಿತ್ತು
ಅಧ್ಯಾಯ ೨ಗಾಢ ಕತ್ತಲಲ್ಲಿ ಅವನ ಆಕ್ರಂದನದ ಆರ್ಭಟ ಗುಡುಗಿನಂತೆ ಕೇಳಿಸುತ್ತಿತ್ತು. ಸುತ್ತಲೂ ಬಿರುಗಾಳಿಯನ್ನೇ ತರಿಸುವಂತೆ “ಸಾರಿಕಾ… ಸಾರಿಕಾ…” ಎನ್ನುವ ಅವನ ಕೂಗು ಪ್ರತಿಧ್ವನಿಸುತ್ತಿತ್ತು.ಪ್ರಜ್ಞೆ ತಪ್ಪಿ ಅವನ ಬಾಹುಗಳಲ್ಲಿ ಬಿದ್ದಿದ್ದ ಸಾರಿಕೆಯನ್ನು ತಬ್ಬಿಕೊಂಡ ಅವನು ಆಕಾಶದ ಕಡೆ ಮುಖ ಮಾಡಿದ. ಆಗಸದ ಮೇಲ್ಭಾಗದಲ್ಲಿ ಅಡಗಿಕೊಂಡಿದ್ದ ಕಾರ್ಮೋಡಗಳು ಕ್ಷಣದಲ್ಲಿ ಸರಿದು, ಮರೆಯಾಗಿದ್ದ ಪೂರ್ಣಚಂದ್ರನ ಕಿರಣಗಳು ಅವನ ಮೇಲೆ ...Read Moreಅವನ ಅನಿಯಂತ್ರಿತ ಮೃಗರೂಪದ ಮೇಲೆ ಬಿದ್ದ ತಕ್ಷಣ ಅವನ ರೂಪ ನಿಧಾನವಾಗಿ ಬದಲಾಗತೊಡಗಿತು. ಕೋರೆ ಹಲ್ಲುಗಳು ಮಾಯವಾಗಿ, ಕೆಂಪು ಕಣ್ಣುಗಳು ಮಂಕಾಗಿ, ಅರ್ಧ ಪಿಶಾಚಿಯ ರೂಪದಿಂದ ಅವನು ತನ್ನ ನಿಜವಾದ ಸುಂದರ ತರುಣನ ರೂಪಕ್ಕೆ ಮರಳಿದ. ಆದರೆ ಅವನ ಬೆನ್ನಿನ ಹಿಂದೆ ಇನ್ನೂ ಗರಿಗೆದರುತ್ತಿದ್ದ ಕಪ್ಪು ಬೃಹತ್ ರೆಕ್ಕೆಗಳು ಅವನ ದಾನವಸ್ವಭಾವವನ್ನು ನೆನಪಿಸುತ್ತಿದ್ದವು. ರೆಕ್ಕೆಗಳನ್ನು ಚಾಚಿಕೊಂಡು ಅವನು ಕ್ಷಣದಲ್ಲಿ ಆಕಾಶಕ್ಕೆ ಎದ್ದನು.@@@@@“ಏ ವಿಹಾನ್! ಇವಳನ್ನು ಇಲ್ಲಿ ಯಾಕೆ ತಂದು ಬಿಟ್ಟಿದ್ದೀಯಾ?” ಎಂದಳು ಮಾಯಾ, ಕೋಪದಿಂದ ಅವನನ್ನು ದಿಟ್ಟಿಸಿಕೊಂಡು.ವಿಹಾನ್ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು, ಮಾಯಾದ ಮಾತಿನ