ಪ್ರತಿಭೆ ಎಲ್ಲಿದೆಯೋ ಅಲ್ಲಿ ಯಶಸ್ಸು

  • 20.2k
  • 7.8k

ಪ್ರತಿಭೆ ಎಲ್ಲಿದೆಯೋ ಅಲ್ಲಿದೆ ಯಶಸ್ಸು ಕಿರು ಕಥೆ ಲೇಖಕ- ವಾಮನಾಚಾರ್ಯರಾಮಪ್ರಸಾದ್ ಗೆ ಧಿಕ್ಕಾರ ಧಿಕ್ಕಾರ. ಬೇಕೇ ಬೇಕು ನಮ್ಮ ಬೇಡಿಕೆಗಳು ಈಡೇರಿಸಲೇ ಬೇಕು." ಎನ್ನುವ ನಾಮಫಲಕ ಹಿಡಿದು ಕೊಂಡು ಹೋಟೆಲ್ ಅಶೋಕಾ ಡಿಲಕ್ಸ, ಪವನ ಪೂರ, ಮುಂದೆ ಎಲ್ಲಾ ಸಿಬ್ಬಂದಿಗಳು ಶಾಂತಿಯುತ ವಾಗಿ ಪ್ರತಿಭಟನೆ ಮಾಡುತ್ತಿದ್ದರು. ಅಂದು ಭಾನುವಾರ ಪ್ರವಾಸಿಗರು ಇದೇ ಹೋಟೆಲ್ ಗೆ ಬರುವವರ ಸಂಖ್ಯೆ ಜಾಸ್ತಿ. ಅಕಸ್ಮಾತ್ ಅದೇ ದಿವಸ ಕೆಲಸಗಾರರು ಪ್ರತಿಭಟನೆ ನಡೆಸಿರುವದು ಹೋಟೆಲ್ ಮಾಲೀಕ ರಾಮಪ್ರಸಾದ್ ಶೆಣೈ ಅವರಿಗೆ ಅನಿರೀಕ್ಷಿತ ಆಘಾತ ವಾಯಿತು.ಪವನಪುರ ಊರು ಚಿಕ್ಕ ದಾದರೂ ವಿಶ್ವದ ಗಮನ ಸೆಳೆದ ಪ್ರವಾಸಿ ಕೇಂದ್ರ. ನಗರದ ಪ್ರವೇಶ ದ್ವಾರದ ಮೇಲೆ ಐವತ್ತು ಅಡಿ ಎತ್ತರ ಇರುವ ಸುಂದರ ವಾದ ಆಂಜನೇಯ ಮೂರ್ತಿ. ಒಳಗೆ ಪ್ರವೇಶ ಮಾಡಿದಮೇಲೆ ಬಲ ಭಾಗದಲ್ಲಿ ಒಂದು ದೊಡ್ಡದಾದ ಬೋರ್ಡ್. ಅದರಲ್ಲಿ ಪವನಪುರ ಪ್ರವಾಸಿ ಕೇಂದ್ರದ ಬಗ್ಗೆ ವಿವರವಾದ ಮಾಹಿತಿ. ಆಂಜನಾ ನದಿ ದಡದ ಮೇಲೆ ಇರುವ ಊರು ಪವನಪುರ. ಮೂರು ಕಿಲೋ