ಸಾರಿಕೆ - 1

  • 23.1k
  • 9.7k

ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ. ಅವಳು ಸಣ್ಣಪ್ರಾಯದಲ್ಲಿ ಔಷದಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದ್ದಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು. ಅಷ್ಟೇ ಅಲ್ಲದೇ ಅವಳಿಗೆ ನೃತ್ಯ ಎಂದರೆ ತುಂಬಾ ಪ್ರೀತಿ , ಅವಳು ನೃತ್ಯ ಕಲೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದಳು . ಅವಳ ತಾಯಿಯಂತೆ ಪ್ರಸಿದ್ಧಿಯಾಗಿದ್ದಳು , ನೃತ್ಯವು ಅವಳಿಗೆ ತಾಯಿಯ ಬಳುವಳಿ ಎಂದರೆ ತಪ್ಪಾಗಲಾರದು .ಒಂದು ದಿನ ಅವಳು ಕೆಲವು ಮೂಲಿಕೆ ವಸ್ತುಗಳನ್ನು ಹುಡುಕುತ್ತಾ ಸೌರಾಷ್ಟ್ರ ದೇಶಕ್ಕೆ ಪಯಣಿಸಿದಳು. ಆದರೆ ಅದೇ ಸಂದರ್ಭದಲ್ಲಿ ಸೌರಾಷ್ಟ್ರ ದೇಶದ ಪುರಂದರಗಡ ಕ್ಕೆ ವೀರ ಕೇಸರಿ ದಾಳಿ ಇಟ್ಟಿದ್ದರು!ನಗರ ಅಗ್ನಿಗೆ ಆಹುತಿಯಾ ಮಾಡಿದರು.ಸುತ್ತ ನೀರವ ಮೌನ , ಅಲ್ಲಲ್ಲಿ ಹೆಪ್ಪುಗಟ್ಟಿದ ರಕ್ತಗಳು , ರುಂಡ ಮುಂಡ ಕಳೆದುಕೊಂಡ ಸೈನಿಕರ ಕಳೇಬರಗಳು ಸಾಲುಗಳು. ಹಾಗೇ ನೋಡುತ್ತ ಮುಂದೆ ಹೋಗುತ್ತಿದ್ದ ಸಾರಿಕೆಯ ಕಣ್ಣುಗಳಿಗೆ ವಿಜಯ ಸ್ತಂಭ ಕಂಡಿತು.ಅದನ್ನು ನೋಡಿ ಸಾರಿಕೆಗೆ ಭಯದಿಂದ ಮತ್ತು ಮುಂದೆ ಹೆಜ್ಜೆ ಇಡಲು ಸೋಲುತ್ತಿದ್ದವು ಕಾಲುಗಳು . ಇಷ್ಟು ಸಮಯ