ರಹಸ್ಯ ಬಿಂದು

  • 14.6k
  • 3.7k

   ʼʼಚೆನ್ನಿ... ಲೇ ಚೆನ್ನಿ..ಮಳೆ ಬರೊ ಹಾಗಿದೆ. ಹಸುನೆಲ್ಲ ತಂದು ಕಟ್‌ ಹಾಕ್‌ ಬಾರ್ದೇನೆ? ಹಂಗೆ ಮನೆ ತಾವ ಸ್ವಲ್ಪ ಕಾಳ್ಜಿ ಮಾಡ್ಕ್ಯ. ಮೋಡ ನೋಡದ್ರೆ ಜಬರ್ದಸ್ತ್‌ ಮಳೆ ಬರಂಗದೆ. ಮನೆ ಮಾಡು ಸೋರ್ತದೆ ಅಂತ ರಾಗ ತೆಗಿಬೇಡ. ಬಕೇಟೊ, ಹಂಡೆನೊ ಏನಾದ್ರೂ ರೆಡಿ ಮಾಡಿಟ್ಕ. ನಾನ್‌ ಒಸಿ ರಾಮಣ್ಣನ್‌ ಟೀ ಅಂಗಡಿ ಕಡೆ ಹೋಗ್‌ ಬತ್ತೀನಿ ಕಣೆʼʼ ಅಂತ ಹೆಂಡ್ತಿಗ್‌ ಹೇಳಿದ ಸಿದ್ಧ ಯಾವ್ದಕ್ಕೂ ಇರಲಿ ಅಂತ ಕಂಬಳಿಕೊಪ್ಪೆ ತಗೊಂಡು ಹೊರಟ. ಅವ್ನ್‌ ಬೆನ್‌ ಹಿಂದೆ ನಿಂತಿದ್ದ ಚೆನ್ನಿ ಅಸಹನೇಲಿ, ʼʼಸಿದ್ಧ, ಈಗ್‌ ಎಲ್‌ ಹೊಂಟ್ಯೊ? ಮಳೆ ಬರಂಗದೆ ಅಂತ ಹೇಳಿ ನನ್ ಒಂಟಿಯಾಗ್‌ ಬಿಟ್‌ ಹೊಂಟ್ಯನಾ? ಎಷ್ಟೊಂದ್‌ ಕೆಲ್ಸಗಳ್‌ ಬಾಕಿ ಉಳ್ಕೊಂಡಾವೆ. ನೀನ್‌ ಯಾಕ್‌ ಹಿಂಗ್‌ ಆಡ್ತೀಯೊ. ಆ ರಾಮಣ್ಣನ್‌ ಹೋಟೆಲ್ನಾಗ ಅಂತದ್‌ ಏನೈತಿ? ಕಿಸೆಲಿ ಒಂದ್‌ ಕಾಸು ಇಲ್ದಿದ್ರು ರಾಮಣ್ಣನ್‌ ಹೋಟೆಲ್ಗ್‌ ಹೋಗ್ತಿ. ಬೀಡಿ ಸೇದಕಾ? ಅಥ್ವ ಅಲ್‌ ಬರೊ ಹೆಂಗಸ್ರನ ನೋಡಾಕ?ʼʼ ಅಂತ ಕೇಳ್‌ದ್ಲು. ಸಿದ್ಧ