ಪ್ರತಿಷ್ಠೆ ಯ ಪರಿಣಾಮ ಅನಾಹುತ

  • 4.8k
  • 1.8k

ಪ್ರತಿಷ್ಠೆ ಯ ಪರಿಣಾಮ ಅನಾಹುತ ರಾತ್ರಿ ಒಂಭತ್ತು ಗಂಟೆ ಸಮಯ. ಹುಣ್ಣಿಮೆಯ ಸುಂದರವಾದ ಮನಮೋಹಕ ಬೆಳದಿಂಗಳು. ರಾಘವಪುರ್ ಲಾಯರ್ ಸೇತುರಾಮ್ ಅವರ ಮನೆಯ ವಿಶಾಲವಾದ ಮಾಳಿಗೆ ಮೇಲೆ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ. ಅವರ ಏಕೈಕ ಪುತ್ರಿ ಶ್ರೇಯಾ ವಧು ಹಾಗೂ ರಾಘವಪುರ್ ಮಾಜಿ ಶಾಸಕರು ಗೋಪಿನಾಥ್ ಹಾಗೂ ತ್ರಿವೇಣಿಯವರ ಪುತ್ರ ಅಭಿಷೇಕ್ ವರ. ಸ್ವತಃ ಸೇತುರಾಮ ಮತ್ತು ಅವರ ಪತ್ನಿ ಸತ್ಯಭಾಮಾ ಸ್ವಾಗತ ಮಾಡಲು ಮುಖ್ಯ ದ್ವಾರ ದಲ್ಲಿ ನಿಂತು ಪ್ರತಿಯೊಬ್ಬರಿಗೂ ಮಾಳಿಗೆ ಗೆ ಹೋಗುವ ದಾರಿ ತೋರಿಸಿದರು. ಸಮಯಕ್ಕೆ ಸರಿಯಾಗಿ ಎಲ್ಲರೂ ಆಗಮಿಸಿದರು. "ನಮಸ್ಕಾರ, ಗೋಪಿನಾಥ್ ರಾಯರೇ, ಸ್ವಾಗತ. ಬಲ ಭಾಗದ ಕಡೆ ಇರುವ ಮೆಟ್ಟಲು ಮೇಲೆ ಹೋಗಬೇಕು," ಎಂದರು ಸೇತುರಾಮ. ಅದರಂತೆ ಸತ್ಯಭಾಮಾ ಅವರು ತ್ರಿವೇಣಿ ಅವರಿಗೆ ಸ್ವಾಗತ ಕೋರಿದರು. ಇತರ ಅತಿಥಿಗಳನ್ನು ಆದರದಿಂದ ಬರಮಾಡಿ ಕೊಂಡರು. ಭಾವಿ ಬೀಗರು ಮೆಟ್ಟಲು ಹತ್ತಬೇಕು ಎನ್ನುವದರಲ್ಲಿ ಅವರ ಎಡಭಾಗ ದಿಂದ ಒಂದು ಕರಿ ಬೆಕ್ಕು ಕರ್ಕಶ ಧ್ವನಿಯಿಂದ ಕೂಗುತ್ತ ಹಾದು