ತ್ರಿಮೂರ್ತಿಗಳು ಎಂದರೆ ಹೀಗಿರಬೇಕು

  • 6.2k
  • 1.9k

ತ್ರಿಮೂರ್ತಿಗಳು ಅಂದರೆ ಹೀಗಿರಬೇಕು (ಮೂವರು ಸಹೋದ್ಯೋಗಿಗಳ ರೋಚಕ ಕತೆ) ಲೇಖಕರು ವಾಮನ್ ಆಚಾರ್ಯ ನವೀನ್, ಚಕ್ರಪಾಣಿ ಹಾಗೂ ರೋಹಿತ್, ಮೂವತ್ತರಿಂದ ಮೂವತ್ತೈದು ವರ್ಷ ಆಸುಪಾಸು ವಯಸ್ಸು ಇರುವ ಯುವಕರು ಇನ್ಫೋ ಇಂಟರ್ ನ್ಯಾಷನಲ್ ಕಂಪನಿಯ ಮಾರ್ಕೆಟಿಂಗ್ ಎಕ್ಸೆಕುಟಿವ್ಸ್. ಅಂದು ಇಡೀ ದಿವಸ ಬೆಂಗಳೂರು ನಗರದ 30 ಅಂತಸ್ತಿನ ಗಗನ ಚುಂಬಿ ಹೋಟೆಲ್ ಪ್ಯಾರ ಡೈಜ್ ಕಾಂನ್ಫ್ರೆನ್ಸ್ ಹಾಲ್ ನಲ್ಲಿ ವಿದೇಶಿ ಕಸ್ಟಮರ್ಸ್ ಜೊತೆಗೆ ಹಲವಾರು ಸುತ್ತು ಬಿಜನೆಸ್ ಪ್ರಮೋಷನ್ ಮೀಟಿಂಗ್ ಮಾಡಿ ಕೊನೆಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿಸುವಲ್ಲಿ ಯಶಸ್ವಿ ಆದರು. ಅದಾದ ನಂತರ ವಿಶ್ರಾಂತಿ ತೆಗೆದು ಕೊಳ್ಳಲು ತಾವು ಬುಕ್ ಮಾಡಿದ ಅದೇ ಹೋಟೆಲ್ 15 ನೆ ಅಂತಸ್ತಿ ನಲ್ಲಿ ಇರುವ ರೂಮ್ ನಂಬರ್ 15007 ಕಡೆ ಹೋಗಲು ಲಿಫ್ಟ್ ಕಡೆ ಹೋದರು. ಮೂರು ಕಡೆ ಲಿಫ್ಟ್ ಇದ್ದರೂ ಎಲ್ಲವೂ ಕೆಟ್ಟು ಹೋದ ಕಾರಣ ಮೆಟ್ಟಲು ಹತ್ತಿ ಹೋಗುವ ಅನಿವಾರ್ಯತೆ ಬಂದಿತು. ಮೆಟ್ಟಲು ಹತ್ತುವದು ತುಂಬಾ ಶ್ರಮ. ಇದರಿಂದ ಏನು