ಭಟ್ರು ಆದ್ರು ಶಟ್ರು

  • 6.9k
  • 2.1k

ಭಟ್ರು ಆದ್ರು ಶಟ್ರು(ವಿಭಿನ್ನ ಕಿರು ಕತೆ)ಲೇಖಕರು ವಾಮನ್ ಆಚಾರ್ಯರಾತ್ರಿ ಒಂಭತ್ತು ಗಂಟೆ ಸಮಯ. ಅದೇ ತಾನೇ ಮನೆಗೆ ಬಂದ ಪತಿಗೆ ಪತ್ನಿ,“ರೀ, ನಾನು ಒಬ್ಳೆ ಮನ್ಯಾಗ ಇದ್ದೀನಿ. ನಿಮ್ಮ ಹಾದಿ ನೋಡಿ ನೋಡಿ ಸಾಕು ಸಾಕಾಯ್ತು. ಇವತ್ತಿನ ದಿನ ಖಾಸ್ ಇದೆ0ತ ನಿಮಗೆ ಗೊತ್ತಿಲ್ಲೇನು? ಇಂದು ನಮ್ಮ ಲಗ್ನ ಆಗಿ ಒಂದು ವರ್ಷ ಆಯ್ತು. ಸ್ಪೆಷಲ್ ಅಡಗಿ ಮಾಡಿನಿ. ನೀವು ಜಲ್ದಿ ಯಾಕ ಬರ0ಗಿಲ್ಲ? ಅಂಗಡ್ಯಾಗ್ ಕೂತ ಮ್ಯಾಲ ಮನೆಯಲ್ಲಿರುವ ಹೆಂಡ್ತಿ ಯನ್ನು ಮರೆತು ಬಿಡ್ತೀರಿ. ಫೋನ್ ಮಾಡಿದರೆ ಫೋನ್ ಎತ್ತುದಿಲ್ಲ,” ಎಂದಳು ಒಂದು ವರ್ಷದ ಹಿಂದೆ ಮದುವೆ ಆದ ಕುಸುಮ ತನ್ನ ಗಂಡ ಗುಂಡ ಭಟ್ರಿಗೆ ನಗುತ್ತ.“ಹೌದೇ! ನಾನು ಜಲ್ದಿ ಬರಬೇಕು ಅನ್ನುದ್ರಾಗ ಬೇರೆ ಊರಿನಿಂದ ಬಂದ ನಾಲ್ಕೈದು ಜನ ತಲಿ ಶೂಲೆ ಮಾಡುವ ಗಿರಾಕಿ ಬಂದ್ರು. ಅವರು ಬಂದವರೇ ಅದು ಇದು ಕೇಳ್ಕೋತ ಕೊನೆಗೆ ವ್ಯಾಪಾರ ಮಾಡದೆ ಹೋದರು. ಅದ್ರಿಂದ ತಡ ಆಯ್ತು. ಭಡಕ್ಕನೆ ಒಂದು ಕಪ್ ಖಡಕ್