ಶ್ಯಾಮನಿಗೆ ಸಿಕ್ಕಳು ಶ್ಯಾಮಲೆ

  • 7.7k
  • 2.7k

ಶ್ಯಾಮ ನಿಗೆ ಸಿಕ್ಕಳು ಶ್ಯಾಮಲೆ (ಆಕಸ್ಮಿಕ ಪ್ರೇಮ ಕಥೆ) ಲೇಖಕರು ವಾಮನಾಚಾರ್ಯ ಬೆಳಗಿನ ಹತ್ತು ಗಂಟೆ ಸಮಯ ಬೆಟ್ಟದೂರು ಗ್ರಾಮದಲ್ಲಿ ಬೇಸಿಗೆ ಬಿಸಿಲು ಪ್ರಖರ ವಾಗಿದೆ. ಇಲ್ಲಿಂದ ರಾಘವಪುರ್ ಹೋಗುವ ಮಾರ್ಗದಲ್ಲಿ ರಸ್ತೆಯ ಮೇಲೆ ಓರ್ವ ಯುವತಿ ಏಳು ವರ್ಷದ ಬಾಲಕನನ್ನು ಎತ್ತಿಕೊಂಡು ಹೋಗುವ ದೃಶ್ಯ ನೋಡಿದವರಿಗೆ ಕರುಣೆ ಬರು ವದು ಸಹಜ. ಹಿಂದೆ ಬರುತ್ತಿರುವ ಜೀಪ್ ನಿಲ್ಲಿಸಿದ ಯುವಕ ಆಕೆಗೆ,“ಬಾಲಕನನ್ನು ಏಕೆ ಎತ್ತಿಕೊಂಡು ಹೋಗುತ್ತಿ? ಏನಾಗಿದೆ?” ಎಂದು ಕೇಳಿದ.ಆಕೆ ಬಾಲಕನನ್ನು ಕೆಳಗೆ ಇಳಿಸಿ, "ರಾಘವಪುರ್ ಕ್ಕೆ ಹೋಗುವ ಬೆಳಗ್ಗೆ ಬಿಡುವ ಬಸ್ ಕೆಟ್ಟು ನಿಂತಿದೆ. ನಾಲ್ಕು ಕಿಲೋಮೀಟರ್ ನಡೆದು ಕೊಂಡು ಹೋಗುವ ಅನಿವಾರ್ಯತೆ ಬಂದಿದೆ.ದಾರಿಯಲ್ಲಿ ನಮ್ಮ ಗ್ರಾಮದ ಒಬ್ಬ ಬಾಲಕ ಕಂಡ. ಜೊತೆಗೆ ಹೋಗುವಾಗ ಬಿಸಿಲಿನ ತಾಪ ತಾಳ ಲಾರದೆ ಆ ಬಾಲಕ ನೆಲದ ಮೇಲೆ ಕುಸಿದು ಬಿದ್ದು ಎಚ್ಚರ ತಪ್ಪಿತು. ನನ್ನಲ್ಲಿ ಇರುವ ಬಾಟಲಿ ನೀರಿನಿಂದ ಉಪಶಮನ ಮಾಡುವ ಪ್ರಯತ್ನ ಮಾಡಿದೆ. ಅವನು ಕಣ್ಣು ತೆಗೆಯುತ್ತ ಇಲ್ಲ. ಸಮೀಪದಲ್ಲಿ