ಮೌನೋಪನ್ಯಾಸ

  • 5.4k
  • 1.8k

"ಅಪ್ಪು.. ತಯಾರಾಗಿದಿಯಾ..?" ಎಂದು ಕೂಗುತ್ತಾ.. ತನ್ನ ತಮ್ಮ ಉಪನ್ಯಾಸನನ್ನು ಹುಡುಕುತ್ತಾ ಬರುತ್ತಾಳೆ ಅವನ ಅಕ್ಕ ಊರ್ವಿ. ತಾಯಾರಗದೆಯೇ.. ಕನ್ನಡಿ ಮುಂದೆ ಮೌನಾಳ ಫೋಟೋ ಹಿಡಿದು.. ಅವಳ ಮುಖವನ್ನೇ ನೋಡುತ್ತಾ ಮುಖದಲ್ಲೊಂದು ಸಣ್ಣ ನಗು ಹೊತ್ತು ಕುಳಿತ್ತಿದ್ದ ನಮ್ಮ ನಾಯಕ ಉಪನ್ಯಾಸ್ ಚಕ್ರವರ್ತಿ. ಅವನು ಆ ಫೋಟೋ ನೋಡುತ್ತಾ.. ತನ್ನದೇ ನೆನಪುಗಳಲ್ಲಿ ಕಳೆದು ಕುಳಿತಿದ್ದ. ಅದನ್ನು ಗಮನಿಸಿದ ಊರ್ವಿ, "ಅಪ್ಪು.. ನಿನ್ನಾ ಮತ್ತೆ ಮೌನಾಳ ಮದುವೆ ಕಣೋ.. ಇನ್ನೊಂದ್ ಅರ್ಧ ಘಂಟೆಗೆ ಅರಿಶಿನದ ಶಾಸ್ತ್ರ. ನೀನ್ ನೋಡಿದ್ರೆ ಇನ್ನೂ ಫೋಟೋ ನೋಡಿಕೊಂಡೇ ಕಳೆದು ಹೋಗಿದ್ದೀಯ.. ತಯಾರಾಗುವುದು ಯಾವಾಗ..??" ಎನ್ನುತ್ತಾ ಅವನ ಫೋನನ್ನು ಕಸಿಯುತ್ತಾಳೆ ಊರ್ವಿ. "ಅಕ್ಕಾ... ಯಾಕೆ ನಂಗಿಷ್ಟು ನೋವು ಕೊಡುತ್ತಿರುವಿ... ಕೊಡು ಆ ಫೋನನ್ನಾ.." ಎನ್ನುತ್ತಿರುವಾಗ ಉಪನ್ಯಾಸನ ಮುಖದಲ್ಲಿ ಇಷ್ಟು ಹೊತ್ತು ಇದ್ದ ಆ ಮುಗುಳುನಗೆ ಮರೆಯಾಗುತ್ತದೆ. "ನಾಡಿದ್ದೇ ಮೌನಾ ಜೊತೆ ಮದುವೆ ಕಣೋ.. ಈ ಫೋಟೋ ನೋಡಿಕೊಂಡೇ ಇನ್ನೂ ಖುಷಿ ಪಡುತ್ತಿದ್ದರೆ, ಹೇಗೋ... ಎದ್ದೇಳು.. ಈಗ ಅರಿಶಿನ ಶಾಸ್ತ್ರಕ್ಕೆ ಬೇಗ