ಎಲ್ಲರಿಗೂ ನಮಸ್ಕಾರ ,ನಾನು ಬರೆಯುವ ಈ ಕಥೆ ಕೇವಲ ಕಾಲ್ಪನಿಕ ಯಾವುದೇ ವಿಷಯ,ವ್ಯಕ್ತಿ,ಸ್ಥಳಕ್ಕೆ ಸಂಬದ್ದಿಸಿದ್ದಾಗಿರುವುದಿಲ್ಲ ಇದು ನನ್ನ ಮೊದಲ ಕಥೆ ತಪ್ಪಿದಲ್ಲಿ ಕ್ಷಮಿಸಿ, ಈಗ ಕಥೆ ಪ್ರಾರಂಭಿಸೋಣ ಈ ಕಥೆಯು ತುಂಬು ಕುಟುಂಬದ್ದಾಗಿದೆ ಇಲ್ಲಿ ಹಲವಾರು ಪಾತ್ರದಾರಿಗಳು ಬರುತ್ತಾರೆ ಸಂದರ್ಭಕ್ಕೆ ತಕ್ಕಂತೆ ನೋಡುತ್ತಾ ಹೋಗೋಣ ಆದರೆ ಈ ಕಥೆಯ ಕೆಲವು ಪ್ರಮುಖ ಪಾತ್ರದಾರಿಗಳನ್ನು ಪರಿಚಯಿಸುತ್ತೇನೆ ಕಥೆಯ ನಾಯಕ ಜೆಕೆ (ಜಯ ಕಾರ್ತಿಕ್) ಇಡೀ ಕಾಲೇಜನ ಹುಡುಗಿಯರು ಇವನ ಫ್ಯಾನ್ಸ್ ಅಷ್ಟು ಸುಂದರವಾಗಿರುವ ಇವನು. ಅವನ ಸೊಗಸಾದ ದೇಹ, ಉನ್ನತ ಹೈಟ್, ತೀಕ್ಷ್ಣ ಮೂಗು, ಮತ್ತು ಆಕರ್ಷಕ ಕಣ್ಣುಗಳು ಯಾವ ಹೀರೊಗಳಿಗಿಂತ ಏನೂ ಕಡಿಮೆ ಇಲ್ಲ. ಇಡೀ ಕಾಲೇಜಿನ ಹುಡುಗಿಯರ ಹೃದಯ ಗೆದ್ದಿರುವ ಅವನ ಈ ಬಾಹ್ಯ ಸೌಂದರ್ಯವೇ ಅಲ್ಲ, ಅವನ ವ್ಯಕ್ತಿತ್ವವೇ ಮತ್ತಷ್ಟು ಗಮನ ಸೆಳೆಯುತ್ತದೆ.ಅವನು ಸ್ವಲ್ಪ ಕೋಪಿಷ್ಠನಾಗಿದ್ದರೂ, ಎಲ್ಲರ ಬಗ್ಗೆ ಕಾಳಜಿಯುಳ್ಳವನು. ಆತ್ಮೀಯತೆಯಿಂದ ಇತರರಿಗೆ ಸಹಾಯ ಮಾಡುವ ಗುಣಗಳು ಅವನನ್ನು ಇನ್ನಷ್ಟು ವಿಶೇಷವಾಗಿಸುತ್ತವೆ. ತುಂಬು ಕುಟುಂಬದಲ್ಲಿ ಬೆಳೆದ ಇವನು ಕುಟುಂಬದ ಮಹತ್ವ