ನಮ್ಮದೊಂದು ಚಿಕ್ಕ ಕುಟುಂಬ ಅದರಲ್ಲಿ ನಾನು ಅಮ್ಮ, ಅಪ್ಪ. ನನ್ನ ಹೆಸರು ರಮ್ಯಾ ಅಂತ. ನಾನು ೬ ನೇ ತರಗತಿಯಲ್ಲಿ ಓದುತ್ತಿದ್ದೆ. ಒಂದು ದಿನ ನಾನು ಮತ್ತು ನನ್ನ ಚಿಕ್ಕಪ್ಪನ ಮಗಳು ಶಾಲೆಗೆ ಹೋಗುವಾಗ ದಾರಿಯಲ್ಲಿ ಒಂದು ದೊಡ್ಡ ಹೆಣ್ಣು ನಾಯಿ ಸತ್ತು ಬಿದ್ದಿತ್ತು. ಆ ಹೆಣ್ಣು ನಾಯಿಗೆ ೪-೫ ಮರಿಗಳು ಇದ್ದವು. ಪಾಪ ಆ ಮರಿಗಳಿಗೆ ಅರಿವಿಲ್ಲ ತಮ್ಮ ತಾಯಿ ಸತ್ತಿದ್ದಾಳೆ ಅಂತ, ಪಾಪ ಆ ಏನೂ ಅರಿಯದ ಪುಟ್ಟ ಮರಿಗಳು ಸತ್ತು ಬಿದ್ದಿದ್ದ ತಮ್ಮ ತಾಯಿಯ ಮೊಲೆ ಹಾಲನ್ನು ಕುಡಿಯುತಿತ್ತು. ಆ ದೃಶ್ಯವನ್ನು ನೋಡಿದ ನನಗೆ ಕರುಳುಹಿಂಡುವಂತಾಯಿತು . ನನಗೆ ಅಲ್ಲಿಂದ ಆ ನಾಯಿ ಮರಿಗಳನ್ನು ಬಿಟ್ಟು ಹೋಗಲು ಮನಸ್ಸೇ ಬರಲಿಲ್ಲ ಆದರೂ ನಾನು ಹೇಗಾದರೂ ಅಲ್ಲಿಂದ ಬೇಸರದಿಂದ ಶಾಲೆಗೆ ಹೊರಟೆ . ಆಗ ನನ್ನ ತಲೆಗೊಂದು ಯೋಚನೆ ಬಂದಿತು ಏನೆಂದರೆ ಅದರಲ್ಲಿ ಒಂದು ಮರಿಯನ್ನು ಮನೆಗೆ ತೆಗೆದುಕೊಂಡು ಹೋಗುವ ಎಂದು. ಹೀಗೆ