ಒಂದು ಪುಟ್ಟ ಹಳ್ಳಿಯಲ್ಲಿ , ಒಂದು ಪುಟ್ಟ ಗುಡಿಸಲಿನಲ್ಲಿ ದೇವಪ್ಪ ಮತ್ತು ಕವಿತಮ್ಮ ಎಂಬ ದಂಪತಿಗಳು ವಾಸವಾಗಿದ್ದರು. ಈ ದಂಪತಿಗಳಿಗೆ ಕೃಷ್ಣ ಎಂಬ ಒಬ್ಬನೇ ಒಬ್ಬ ಮಗನಿದ್ದ. ಅವನು ೪ ನೇ ತರಗತಿಯಲ್ಲಿ ಓದುತ್ತಿದ್ದ. ಇವರು ಅವರದ್ದೇಯಾದ ಪುಟ್ಟ ಪ್ರಪಂಚದಲ್ಲಿ ಬಡತನವಿದ್ದರೂ, ಅದು ಯಾವುದನ್ನು ಲೆಕ್ಕಿಸದೆ ನೆಮ್ಮದಿಯಾಗಿ ದಿನ ಕಳೆಯುತ್ತಿದ್ದರು. ಇವರ ಕುಟುಂಬ ಚೆನ್ನಾಗಿ ಇತ್ತು. ದೇವಪ್ಪ ತೆಂಗಿನ ಕಾಯಿ ತೆಗೆಯುವ ಕೆಲಸ ಮಾಡುತ್ತಿದ್ದ , ಕವಿತಮ್ಮ ಕೃಷ್ಣ ಓದುತ್ತಿದ್ದ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಳು. ಆದರೆ ಆಘಾತಕಾರಿಯಾದ ವಿಷಯವೇನೆಂದರೆ, ಕವಿತಮ್ಮನಿಗೆ ಒಂದು ಕಣ್ಣು ಇಲ್ಲ. ಆದರೆ ಇವಳು ಒಂದು ಕಣ್ಣು ಇಲ್ಲ ಎಂದು ಯಾವತ್ತೂ ಕೊರಗಿ ಕುಳಿತವಳು ಅಲ್ಲ. ಇವಳಿಗೆ ಒಂದು ಕಣ್ಣು ಇಲ್ಲದಕ್ಕೆ ಕಾರಣ ಗೊತ್ತಿರುವುದು ಅವಳ ಗಂಡನಿಗೆ ಮಾತ್ರ. ಮಿಕ್ಕಿದ್ದವರಿಗೆ ಯಾರಿಗೂ ಗೊತ್ತಿಲ್ಲ. ಇವಳ ಬಳಿ ಯಾರಾದರೂ ಕಣ್ಣಿಗೆ ಏನಾಯಿತು ಅಂತ ಕೇಳಿದರೆ , ಅವಳು ಏನು ಉತ್ತರಕೂಡದೆ ಸುಮ್ಮನಾಗುತ್ತಿದ್ದಳು. ಅವಳ ಮಗ ಕೃಷ್ಣ ಸಹ ಕೇಳಿದರು