ಇನ್ನೂ ಈ ಕಡೆ ಸ್ವಾತಿ, ತನ್ನ ರೂಮ್ ನಲ್ಲಿ ಬೆಡ್ ಮೇಲೆ ಒಬ್ಬಳೆ ಯೋಚನೆ ಯೋಚನೆ ಮಾಡ್ತಾ ಕುಳಿತಿರುತ್ತಾಳೆ, ಅಲ್ಲ ನಾನು ಅಂತ ವಿಷಯ ಏನು ಹೇಳಿದೆ ಅಂತ ಜೆಕೆ ನನ್ನ ಮೇಲೆ ಕೋಪ ಮಾಡ್ಕೊಂಡ ಇಷ್ಟು ವರ್ಷದಲ್ಲಿ ಅವನಿಗೆ ಎಷ್ಟುಸಲ ಕಾಡಿಸಿದಿನಿ ಲೆಕ್ಕನೆ ಇಲ್ಲ ತುಂಬಾ ಸಲ ಅವನ್ ಮೇಲೆ ನಾನೇ ಕೋಪ ಮಾಡಿಕೊಂಡರು ನನ್ನ ಮೇಲೆ ಅವನು ಒಂದ್ಸಲನು ರೇಗಿಲ್ಲ ಕೋಪ ಮಾಡಿಕೊಂಡಿಲ್ಲ ಆದರೆ ಈ ಚಿಕ್ಕ ವಿಷಯಕ್ಕೆ ನನ್ನ ಮೇಲೆ ಆತರ ಕೋಪ ಮಾಡಿಕೊಂಡಿದಾನಲ್ಲ ಅಂತ ಯೋಚನೆ ಮಾಡುತ್ತಾ ಇರುವಾಗ ಅಷ್ಟರಲ್ಲೇ ಸ್ವಾತಿಯ ಅಪ್ಪ ಶಿವು ರೂಮ್ ನಾ ಮೆಲ್ಲಗೆ ತೆಗೆದು ಒಳಗೆ ಬರ್ತಾನೆ " ಪುಟ್ಟ ಯಾಕೋ ಊಟ ಮಾಡಿಲ್ವಂತೆ ನಿಮ್ಮ ಅಮ್ಮ ಹೇಳಿದ್ಲು ಏನಾಯ್ತೋ ಕಂದ " ಅಪ್ಪ... ಅಂತ ಗಟ್ಟಿಯಾಗಿ ತಬ್ಬಿಕೊಂಡು ಅಪ್ಪನ ತೋಳುಗಳಲ್ಲಿ ಒರಗಿ, ಕಾಲೇಜ್ ಅಲ್ಲಿ ನಡೆದ ವಿಷಯವನ್ನೆಲ್ಲ ಹೇಳುತ್ತಾಳೆ "ನನ್ ಮೇಲೆ ಜೆಕೆ ತುಂಬಾ ಕೋಪ ಮಾಡಿಕೊಂಡಿದ್ದಾನೆ ನೋಡದ ಒಂದ್