ಸ್ವಾತಿ ಜೆಕೆ ರೂಮಿನಿಂದ ನಿಧಾನವಾಗಿ ಕೆಳಗೆ ಬರುತ್ತಾಳೆ. ಇನ್ನೂ ಬೆಳಗಿನ ಜಾಸ್ತಿಯೇ ಇದ್ದರೂ ಮನೆ ತುಂಬಾ ಚಲನೆಯ ಆಲಾಪ. ಕಿಚನ್‌ನಲ್ಲಿ ಚಂದ್ರಿಕಾ, ಕಮಲ, ಯಶೋಧಾ, ಹಾಗೂ ಅವರ ಸೊಸೆಯಂದಿರು ರಮ್ಯಾ, ಸೌಮ್ಯಾ, ವೃಂದಾ—ಎಲ್ಲರೂ ಟಿಫನ್ ಗೆ ರೆಡಿ ಮಾಡ್ತೀರ್ತಾರೆ ಚಂದ್ರಿಕಾ ( ಮುಗುಳ್ನಗೆ ಬೀರುತ್ತಾ ): "ಸ್ವಾತಿ ಟಿಫನ್ ಮಾಡು ಬಾ ಕಂದ" ,ಯಶೋಧ : "ಸ್ವಾತಿ ಜೆಕೆ ಇನ್ನು ಡಲ್ಆಗಿಯೇ ಇದಾನಾ" ? ಸ್ವಾತಿ :" ಇಲ್ಲ ಆಂಟಿ ಅವನು ಈಗ ಫರ್ಫೆಕ್ಟ್" ಯಶೋಧಾ :" ಸದ್ಯ.. ಈಗಲಾದರೂ ಸರಿ ಹೋದನಲ್ಲ"ಆಗ ಕಮಲ : "ಅಲ್ಲ ನಿನ್ನೆ ಯಾಕೆ ಅವನು ಹಾಗೆ ಆಡ್ತಿದ್ದ" ಚಂದ್ರಿಕಾ : "ನಿನ್ನೆ ಪಾಪ ನಮ್ಮ ಜೆಕೆ ಮುಖಾನೇ ನೋಡೋಕೆ ಆಗ್ತಾ ಇದ್ದಿದಿಲ್ಲ"ಆಗ ಲಕ್ಕಿ ಅಜ್ಜಿ ಮೆಲ್ಲನೆ ಮೆಟ್ಟಿಲುಗಳನ್ನು ಇಳಿಯುತ್ತಾ ಅಡುಗೆ ಮನೆಕಡೆ ಬರುತ್ತಾರೆ ಲಕ್ಕಿ :" ಸ್ವಾತಿ ಇದ್ದರೆ ಜೆಕೆ ಸರಿಯಾಗೇ ಇರ್ತಾನೆ ಅಲ್ವಾ ಸ್ವಾತಿ" ರಮ್ಯಾ( ಮಾಧವ್ ನ ಹೆಂಡತಿ): "ಅಜ್ಜಿ ಎನ್ ಹೇಳ್ತಾ ಇದ್ದೀರಾ?" ಹಾಗೆ ಎಲ್ಲರೂ