ಅಧ್ಯಾಯ 8 : "ಹೃದಯದಿಂದ ಬಂದ ಯೋಜನೆ" ಜೆಕೆ, ಕಾರ್ತಿಕ್, ಪ್ರವೀಣ್ ಮತ್ತು ಸೂರ್ಯ ಕಾಲೇಜು ಪ್ರವೇಶಿಸುತ್ತಿದ್ದರು. ಸುತ್ತೆಲ್ಲಾ ವಾರ್ಷಿಕೋತ್ಸವದ ಹುರುಪಿನ ತಂಗಾಳಿ. ಆ ವೇಳೆ ಇವರ ಕ್ಲಾಸ್ಮೇಟ್ ಸುರೇಶ್ ಧಾವಿಸುತ್ತಾ ಬಂದು, ಗಂಭೀರ ಮುಖದಿಂದ ಕೇಳಿದನು."ಯಾಕ್ರೋ ಇಷ್ಟು ಲೇಟ್ ಮಾಡಿದ್ರಿ? ಜೆಕೆ, ನಿನ್ನನ್ನ ಪ್ರಿನ್ಸಿಪಾಲ್ ಕರೀತಾ ಇದ್ರು!"ಜೆಕೆ ಶಾಂತವಾಗಿ ಒಂದು ನೋಟ ಹರಿಸಿ, ನಗುತ್ತಾ ಉತ್ತರಿಸಿದನು, "ಓಕೆ, ನಾನು ಹೋಗಿ ಕೇಳ್ತೀನಿ. ಸೂರ್ಯ, ನೀನು ಪ್ರೋಗ್ರಾಂ ಹ್ಯಾಂಡಲ್ ಮಾಡು. ನೀವು ರಿಹರ್ಸಲ್ ಎಲ್ಲ ಹೇಗಿದೆ ಅಂತಾ ಚೆಕ್ ಮಾಡ್ಕೋ. ನಾನು ಪ್ರಿನ್ಸಿಪಾಲ್ ರೂಮ್ ಗೆ ಹೋಗಿ ಬರ್ತೀನಿ."ಅಂತು, ಆತ ಪ್ರಿನ್ಸಿಪಾಲ್ ರೂಮ್ ಕಡೆ ಹೆಜ್ಜೆ ಇಟ್ಟ. ಹತ್ತಿರ ಬಂದು ತೆರೆದ ಬಾಗಿಲಿಗೆ ಹೆಜ್ಜೆ ಇಟ್ಟು, ಶಿಸ್ತಾಗಿ ಕೇಳಿದನು:"May I come in, Sir?"ಪ್ರಿನ್ಸಿಪಾಲ್ ಗಂಭೀರ ನೋಟದಿಂದ ತಲೆಊಗಿಸಿ ಹೇಳಿದರು, "Come in, ಜಯ ಕಾರ್ತಿಕ್."ಜೆಕೆ ಕೊಂಚ ಗಂಭೀರವಾಗಿ ಹೆಜ್ಜೆ ಹಾಕಿ ಒಳಗೆ ಹೋದನು."ಸರ್, ನೀವು ನನಗೆ ಬರೋಕೆ ಹೇಳಿದ್ರಿ ಅಂತೆ. ನಾವು