ಬಯಸದೆ ಬಂದವಳು... - 11

ಅಧ್ಯಾಯ 11 : "ಸುಳ್ಳಿನ ನಟನೆ ಬಯಲಾದಾಗ"ಪೂರ್ವಿ ಬಯದಲ್ಲಿ ರಾಜೇಶ್ ಮುಖವನ್ನೇ ನೋಡಿದಾಗ ರಾಜೇಶ್ ಮುಗುಳ್ನಗೆ ಬೀರುತ್ತಾನೆ ಪೂರ್ವಿ : "ಇವನಿಗೇನಾದ್ರು ತಲೆ ಕೆಟ್ಟಿದಿಯ ಸಿಕ್ಕಿ ಹಾಕೊಳ್ತೀವಿ ಅನ್ನೋ ಭಯಾನೇ ಇಲ್ಲ , ಅದರಲ್ಲಿ ಈ ಹರ್ಷಾ ಬೇರೆ ನನ್ನ ಬೆಸ್ಟ್ ಫ್ರೆಂಡ್ ಅನ್ಕೊಂಡು ಓಡಾಡ್ತಾಳೆ ಆದರೆ ನಂಗೆ ಹೆಲ್ಪ್ ಮಾಡು ಅಂದ್ರೆ ಆಗಲ್ಲ ಅಂತಾ ನನ್ನ ಒಬ್ಬಂಟಿ ಮಾಡಿ ಹೋಗಿದ್ದಾಳೆ  ಛೇ!.. ನಾನು ಎನ್ ಮಾಡ್ಲಿ ಈಗ ಎಲ್ಲ ಪ್ಲಾನ್ ಉಲ್ಟಾ ಹೊಡಿಯೋತರ ಇದೆಯಲ್ಲ ಅಂತ ಮನಸಲ್ಲಿ ಅಂದುಕೊಳ್ತೀರ್ತಾಳೆ"ಪ್ರಿನ್ಸಿಪಾಲ್  : "ಸರಿ ಬನ್ನಿ ಹೋಗೋಣ ಆದರೆ ಎಲ್ಲರೂ ಬರೋ ಅವಶ್ಯಕತೆ ಇಲ್ಲ ನಾವು ಹೋಗಿ ನೋಡ್ತೀವಿ" ಅಂದಾಗ ರಾಜೇಶ್ ಟೀಮ್ ಕಡೆ ಇರುವ ಒಬ್ಬ ಹುಡುಗ ಅದೆಂಗೆ ಆಗತ್ತೆ ಸರ್ ನಾವು ಎನ್ ಆಗಿದೆ ಅಂತಾ ತಿಳಿದುಕೊಳ್ಳಲೇ ಬೇಕು ಯಾರಿಗೆ ಗೊತ್ತು ನಾವು ಇಲ್ಲದೆ ಇರಬೇಕಾದರೆ ಅಲ್ಲಿ ಏನು ನಡಿಯುತ್ತೋ ಅಂತ ಅಂತಾ ಅಂದಾಗ ಎಲ್ಲಾ ಹುಡುಗರು ನಾವು ಬರ್ತೀವಿ ಅಂತಾ