ಹಸೆಮಣೆ

  • 138
  • 54

        ರುಕ್ಮಿಣಿ ಆಗತಾನೆ ಸ್ನಾನ ಮುಗಿಸಿ, ಒದ್ದೆ ಕೂದಲಿಗೆ ಬಿಳಿ ಟವೆಲ್ ಸುತ್ತಿ, ಗಾಢ ಹಸಿರು ಬಣ್ಣದ ರವಿಕೆ, ತಿಳಿ ಹಸಿರು ಮಿಶ್ರಿತ ಸೀರೆಯ ಒಳ ಲಂಗ ಧರಿಸಿ ಕನ್ನಡಿ ಮುಂದೆ ನಿಂತಳು. ಕನ್ನಡಿಯಲ್ಲಿನ ತನ್ನ ಪ್ರತಿಬಿಂಬವನ್ನು ನೋಡುತ್ತಾ, ತುಟಿಯಂಚಿನಲ್ಲಿ ಒಂದು ಸಣ್ಣ ನಗು ಮೂಡಿತು. ಮೈ ತಂಪಾಗಿತ್ತು, ಮನಸ್ಸು ಪ್ರಶಾಂತವಾಗಿತ್ತು. ಹೊರಗೆ ಜಿನುಗುತ್ತಿದ್ದ ಮಳೆಯ ಸದ್ದು, ಮನೆಯೊಳಗಿನ ನಿಶ್ಯಬ್ದಕ್ಕೆ ತಂಬೂರಿಯ ಶ್ರುತಿಯಂತೆ ಹೊಂದಿಕೊಂಡಿತ್ತು. ತನ್ನ ಕಪ್ಪು ದಟ್ಟ ಕೂದಲಿನಿಂದ ತೊಟ್ಟಿಕ್ಕುತ್ತಿದ್ದ ನೀರಿನ ಹನಿಗಳು, ಹಸಿರು ರವಿಕೆಯ ಹೆಗಲನ್ನು ತೋಯಿಸುತ್ತಿದ್ದವು.ಆವಾಗಲೆ ಬಾಗಿಲ ಕಾಲಿಂಗ್ ಬೆಲ್ 'ಟಿಂಗ್' ಎಂದು ಬಡಿದದ್ದು."ಅಪ್ಪಾ, ಅಮ್ಮ ಇಷ್ಟು ಬೇಗ ಬಂದ್ರೇ?" ಎಂದುಕೊಂಡಳು. ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿದ್ದವರು ಮಧ್ಯಾಹ್ನದೊಳಗೆ ಬರುವುದಾಗಿ ಹೇಳಿದ್ದರು. ಸಮಯ ನೋಡಿದರೆ ಇನ್ನೂ ಹತ್ತೂವರೆಯಾಗಿತ್ತು. ಮೈಮೇಲೆ ಗಮನ ಇಲ್ಲದೆ, ಉಟ್ಟ ಬಟ್ಟೆಯಲ್ಲೆ ಒದ್ದೆ ಕೂದಲಲ್ಲಿ ಬಾಗಿಲು ತೆರೆದಳು.ನೋಡಿದರೆ! ಕೃಷ್ಣ ಎದುರಿಗೆ ನಿಂತಿದ್ದ.ಒಂದು ಕ್ಷಣ ಅವಳಿಗೆ ಏನೂ ತೋಚಲಿಲ್ಲ. ಆರು ಅಡಿ ಎತ್ತರದ