ಅಧ್ಯಾಯ 12 : "ಗಾಳಿಯಲ್ಲಿ ಕಳೆದುಹೋದ ಮಾತುಗಳು"ಇನ್ನು ಈ ಕಡೆ ಅಲ್ರೇಡಿ ತುಂಬಾ ಲೇಟ್ ಆಗಿರೋದ್ರಿಂದ ಪ್ರವೀಣ್ : "ಇವತ್ತು ಆ ಪೂರ್ವಿ ಇಂದ ಎಲ್ಲಾ ಲೇಟ್ ಆಗೋಯ್ತು " ಆಗ ಸ್ವಾತಿ ಕುತೂಹಲದಿಂದ ಅವನತ್ತ ನೋಡಿದಳು,"ಲೇಟ್ ಆಗೋಯ್ತಾ ಏನಕ್ಕೆ? ಈಗ ನಾವು ಮನೆಗೆ ತಾನೇ ಹೋಗ್ತಿರೋದು ಆರಾಮಾಗಿ ಹೋಗಿ ರೆಸ್ಟ್ ಮಾಡು" ಪ್ರವೀಣ್ ನಗುವನ್ನು ತಡೆಯುತ್ತಾ "ಅಯ್ಯೋ ಸ್ವಾತಿ ಇವತ್ತು ಜೆಕೆ ನಿಂಗೆ"... ಅಷ್ಟರಲ್ಲಿ ಜೆಕೆ ಗಾಬರಿಗೊಂಡು ಹೇ! ಪವಿ ಕಾರ್ತಿಕ್ ಪ್ರವೀಣ್ ಕಡೆ ನೋಟವನ್ನು ಹಾಯಿಸುತ್ತಾ "ಸ್ಪಲ್ಪ ಸುಮ್ನೆ ಇರೋ ಮಾರಾಯ".."ಸ್ವಾತಿ ಇವತ್ತು ಕಾಲೇಜಿನಲ್ಲಿ ಅನ್ಯುಯಲ್ ಡೇ ಏನೋ ಮುಗೀತು ಅದೆ ಅದೆ ಋಷಿಗೆ ಅಂತಾ ನಾವು ನಾಲ್ಕು ಜನ ಸೇರಿ ಇಲ್ಲೇ ಹತ್ರ ಇರೋ ಗ್ರೀನ್ ಹೌಸ್ ರೆಸಾರ್ಟ್ ಅಲ್ಲಿ ಸೆಲೆಬ್ರೇಷನ್ ಮಾಡ್ಬೇಕು ಅಂತಾ ಪ್ಲಾನ್ ಮಾಡಿದ್ವಿ".. "ಅದು?? ಹೇ.. ಸೂರ್ಯ ನಂಗೆ ಮುಂದೆ ಎನ್ ಹೇಳ್ಬೇಕು ಗೊತ್ತಾಗ್ತಿಲ್ಲ ನೀನೇ ಏನಾದ್ರೂ ಹೇಳೊ ಅಂತ ಅವನ ಕಿವಿ ಹತ್ರ ಬಂದು ಗುನುಗುತ್ತಾನೆ" "ಅವಾಗ ಸೂರ್ಯ ತುಸು ನಕ್ಕು,