ಅಧ್ಯಾಯ 13 : "ನಿಶಬ್ಧ ಸಂಕೇತಗಳು "ಸ್ವಾತಿ ನಾ ಮನೆಗೆ ಡ್ರಾಪ್ ಮಾಡಿ ಜೆಕೆ ಕಾರ್ತಿಕ್ ರೂಮ್ ಗೆ ಬರುತ್ತಿದ್ದ ಹಾಗೆ ಅಲ್ಲೇ ಇರುವ ಚೇರ್ ಮೇಲೆ ಮೌನವಾಗಿ ಕುಳಿತುಕೊಳ್ತಾನೆ... ಆಗ ಸೂರ್ಯ ತನ್ನ ಬೇಜಾರನ್ನು ಅವನ ಮುಂದೆ ಹೊರಹಾಕುತ್ತಾನೆ "ಜೆಕೆ ಯಾಕೆ ನೀನು ಹೀಗೆ ಮಾಡ್ದೆ ಪ್ರೊಪೋಸ್ ಮಾಡಿದ್ರೆ ಅವಳ ಮನಸಲ್ಲಿ ಏನಿದೆ ಅನ್ನೋದು ಗೊತ್ತಾಗ್ತಿತ್ತು ತಾನೇ... ಈ ದಿನಕೋಸ್ಕರ ಎಷ್ಟೋ ದಿನದಿಂದ ಕಾಯ್ತಿದ್ದೇ ಅಲ್ವಾ ನಂಗಂತೂ ನೀನು ಮಾಡಿದ್ದು ಸ್ವಲ್ಪನೂ ಇಷ್ಟಾ ಆಗಲಿಲ್ಲ"... ( ಕಾರ್ತಿಕ್ ಪಾರ್ಕ್ ಅಲ್ಲಿ ನಡೆದಿರೋ ವಿಷಯ ನಾ ಸೂರ್ಯ ಮತ್ತೆ ಪ್ರವೀಣ್ ಇಬ್ಬರಿಗೂ ಹೇಳಿರ್ತಾನೇ ) ಪ್ರವೀಣ್ : "ಹೌದು ಕಣೋ ಅವಳು ಆ ಲವರ್ಸ್ ಗಳ ಬಗ್ಗೆ ಹೇಳಿದ್ಲು ನೀನು ಯಾಕೆ ಅದನ್ನ ಪರ್ಸನಲ್ ಆಗಿ ತಗೊಂಡಿದಿಯಾ ಅದೆಲ್ಲ ಬಿಡು ಇವತ್ತು ಅವಳು ಸೀರೆ ಉಟ್ಟುಕೊಂಡು ಬಂದಿದ್ದೆ ನಿನಗೋಸ್ಕರ.. ಇಲ್ಲೇ ಗೊತ್ತಾಗಲ್ವಾ ಅವಳು ಕೂಡ ನಿನ್ನ ಪ್ರೀತಿ ಮಾಡ್ತಿದ್ದಾಳೆ ಅಂತಾ"... ಕಾರ್ತಿಕ್ : "ಯಾಕೇ ಸೈಲೆಂಟ್ ಆಗಿದಿಯ