ಬಯಸದೆ ಬಂದವಳು... - 14

ಅಧ್ಯಾಯ 14: "ಹೆಜ್ಜೆಗಳು ಬದಲಾಗುವ ಸಮಯ"ಬೆಳಿಗ್ಗೆ ಎದ್ದು ಎಲ್ಲರೂ ತಮ್ಮ ತಮ್ಮ ಮನೆ ಕಡೆಗೆ ಹೆಜ್ಜೆಗಳನ್ನು ಹಾಕ್ತಾರೆ.... ಜೆಕೆ ತನ್ನ ಮನೆಗೆ ಸ್ಪಲ್ಪ ಭಯದಲ್ಲೇ ಒಳಗಡೆ ಹೆಜ್ಜೆ ಇಡ್ತಾನೆ... ಒಳಗಡೆ ಬರುತ್ತಿದ್ದ ಹಾಗೆ ಆಗ ಮಾಧವ್ ( ಜೆಕೆ ಯ ಅಣ್ಣ) : "ಏನೋ ಒಳ್ಳೆ ಕಳ್ಳರತರ ಯಾರದೋ ಮನೆಗೆ ಬಂದವರ ಹಾಗೆ ಒಳಗಡೆ  ನುಗ್ತಾಇದಿಯಾ, ಆಗ ಜೆಕೆ ಶ್!... ಅವನ ಬಾಯನ್ನು ಗಟ್ಟಿಯಾಗಿ ಹಿಡಿದು ಮುಚ್ಚುತ್ತಾನೆ... ಸುಮ್ನೆ ಇರೋ  ಅಪ್ಪ ,ದೊಡ್ಡಪ್ಪ ಕೆಳಸ್ಗೊಂಡ್ರೆ ಕಷ್ಟ"... "ಮಾಧವ್ ಛೇಡಿಸುತ್ತಾ ನೀನು ಏನೇ ಸಾಹಸ ಮಾಡಿದ್ರು ಅವರಿಂದ ತಪ್ಪಿಸಿಕೊಳ್ಳೇಕೆ ಆಗೋಲ್ಲ ,ಸುಮ್ನೆ ಮನೆಗೆ ಬರೋದು ಬಿಟ್ಟು ಅಲ್ಲಿ ಎನ್ ಮಾಡ್ತಿದ್ದೆ ಹಾಗೆ ಅವನನ್ನು ಇನ್ನೂ ಸ್ವಲ್ಪ ಭಯ ಬೀಳಿಸಲು ನಿನ್ನೆ ಅಪ್ಪ ನಿನ್ನ ಮೇಲೆ ತುಂಬಾ ಕೋಪ ಮಾಡ್ಕೊಂಡಿದ್ರು ಗೊತ್ತಾ"...ಜೆಕೆ ತನ್ನ ಕಣ್ಣುಗಳನ್ನು ಹೊರಳಿಸುತ್ತಾ "ಅದೇನು ಹೊಸ ವಿಷಯನಾ... ಯಾವಾಗ್ಲೂ ನಾನದ್ರೆ ಗುರ್.. ಅಂತಾನೆ ಇರ್ತಾರೆ"   ಮಾಧವ್ : "ಸರಿ ಬೇಗ ಹೋಗಿ ಫ್ರೆಶ್  ಅಪ್ ಆಗಿ