ಬಯಸದೆ ಬಂದವಳು... - 15

ಅಧ್ಯಾಯ 15: "ಪಥ ಬದಲಾವಣೆಯ ವೇಳೆಯಲ್ಲಿ""ಎಲ್ಲರ ಪರೀಕ್ಷೆಗಳು ಮುಗಿದಿದ್ದವು. ಐವರು ಸ್ನೇಹಿತರು ಒಂದು ವಾರದ ಟ್ರಿಪ್‌ಗೆ ಹೋಗಿ ಸುಖವಾಗಿ ಸಮಯ ಕಳೆಯುತ್ತಾ ಹಿಂತಿರುಗಿದರು. ಆ ದಿನಗಳು ನಗೆ, ಆಟ, ಮಾತುಗಳಿಂದ ತುಂಬಿ ತುಳುಕಿದ್ದವು. ಸ್ವಲ್ಪ ದಿನಗಳಲ್ಲೇ ಫಲಿತಾಂಶವೂ ಬಂದಿತು. ನಾಲ್ವರೂ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದರು, ಕಾರ್ತಿಕ್ ಮಾತ್ರ ಇಡೀ ಕಾಲೇಜಿಗೆ ಮೊದಲನೆಯ ಸ್ಥಾನ ಪಡೆದಿದ್ದ. ಆ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಆದರೆ ಯಾವಾಗ ಹೆಚ್ಚು ಸಂತೋಷದಲ್ಲಿ ಇರ್ತಿವೋ ಅವಾಗಲೇ ತಿಳ್ಕೊಂಡು ಬಿಡ್ಬೇಕು ಮುಂದೆ ಏನೋ ಕಾದಿದೆ ಅಂತಾ... ಹಾಗೆ ಇಷ್ಟು ವರ್ಷಗಳಲ್ಲಿ ಒಂದು ದಿನ ಬಿಟ್ಟಿಲ್ಲದ ಇವರುಗಳು ಮುಂದೆ ಎಲ್ಲರ ಹೆಜ್ಜೆಗಳು ಬೇರೆ ಅಗೋ ಸಮಯ"...."ಶಶಿಧರ್ ಮೊದಲೇ ಹೇಳಿದ್ದಂತೆ, ಜೆಕೆ ಮತ್ತು ಸೂರ್ಯನನ್ನು ಹೈಯರ್ ಸ್ಟಡೀಸ್‌ಗಾಗಿ ವಿದೇಶಕ್ಕೆ ಕಳುಹಿಸಬೇಕೆಂಬ ಉದ್ದೇಶದಿಂದ ಇಬ್ಬರನ್ನೂ ಮಾತಾಡಲು ಕರೆಯಲಾಗಿತ್ತು. ಸೂರ್ಯ ತನ್ನ ಮನೆಯವರೊಂದಿಗೆ ಜೆಕೆ ಮನೆಗೆ ಬಂದಿದ್ದ"."ಈ ಕಡೆ ಸೂರ್ಯ ಜೆಕೆ ಕೋಣೆಗೆ ನುಗ್ಗಿದ ಆಗ ಜೆಕೆ ಹಾಯ್ ಸರ್ ಬನ್ನಿ.. ಬನ್ನಿ ಅಂತ ಆತ್ಮೀಯವಾಗಿ ಹೇಳಿದ""ಸೂರ್ಯ ಸ್ವಲ್ಪ