"ವಿ.ವಿ ಗ್ರೂಪ್ ಆಫ್ ಕಂಪನಿ"ಯ ಸಿ.ಇ.ಓ ಮಧ್ಯರಾತ್ರಿ ಹೊತ್ತಿಗೆ ಫಾರಿನ್ ನಿಂದ ಒಂದು ಮುಖ್ಯವಾದ ಪ್ರಾಜೆಕ್ಟ್ ಮೀಟಿಂಗ್ ಮುಗಿಸಿಕೊಂಡು ಮನೆಗೆ ಹೋಗದೆ ಸೀದ ಅವನ ಕಂಪನಿಗೆ ಹೋದನು. ಮನೆಯಲ್ಲಿ ಇರುವವರಿಗೆ ತೊಂದರೆ ಆಗುತ್ತದೆ ಎಂದು ಅಲ್ಲ..... ಯಾಕಂದ್ರೆ ವಿ.ವಿ ಗ್ರೂಪ್ ಆಫ್ ಕಂಪನಿಯ ಸಿ.ಇ.ಓ ವರ್ಕೋಹಾಲಿಕ್ ಅದಕ್ಕೆ..... ಆಫೀಸ್ ಎಂದರೆ ಊಟ, ತಿಂಡಿ, ನಿದ್ದೆಯನ್ನೂ ಬಿಡುವುದಕ್ಕೆ ಯೋಚನೆ ಮಾಡುವವನಲ್ಲ ಈ ಆಸಾಮಿ.ಕೇವಲ ಎರಡು ವರ್ಷಗಳಲ್ಲಿ ವಿ.ವಿ ಗ್ರೂಪ್ ಆಫ್ ಕಂಪನಿಯನ್ನು ದೇಶದ ನಂಬರ್ ಮೂರನೇ ಸ್ಥಾನಕ್ಕೆ ತಂದಿದ್ದಾನೆ ಭೂಪ. 23 ವರ್ಷಕ್ಕೆ ತನ್ನ ಓದನ್ನು ಮುಗಿಸಿ 2 ವರ್ಷ ಅಬ್ರಾಡ್ ನಲ್ಲಿ ಹೆಸರಾಂತ ಕಂಪನಿಯ ಸಿ.ಇ.ಓ ಕೈ ಕೆಳಗೆ ಅವರ ಪಿ.ಎ ಆಗಿ ಕೆಲಸವನ್ನು ಕಲಿತು ಅದರ ಜೊತೆ ಜೊತೆಗೆ ತನ್ನ ಸ್ವಂತಿಕೆಯನ್ನು ಉಪಯೋಗಿಸಿ 26 ವರ್ಷಕ್ಕೆ ತನ್ನ ಕಂಪನಿಯನ್ನು ಭಾರತದಲ್ಲಿ ಸ್ಥಾಪಿಸಿ ಈಗ ಉನ್ನತ ಸ್ಥಾನದಲ್ಲಿ ಕೂರಲು ಕಾರಣ ಅವನಿಗೆ ಕೆಲಸದಲ್ಲಿ ಇರುವ ಶ್ರದ್ಧೆ, ಪರಿಶ್ರಮ, ಹಗಲು ರಾತ್ರಿಗಳ ವ್ಯತ್ಯಾಸ