ಅಧ್ಯಾಯ 18 : "ವಿದಾಯದ ಕ್ಷಣಗಳು,ಮನೆಗೆ ಮರಳುವ ಹಾದಿ "ಮರುದಿನ ಅವರ ಎಕ್ಸಾಮ್ಸ್ ಗಳ ಮುಗಿಸಿ ಮನೆಗೆ ಬಂದರು ಸುಂದರ್ ಮುಖದಲ್ಲಿ ಬೇಜಾರು ಎದ್ದು ತೋರುತ್ತಿತ್ತು ಅಲ್ಲಾ ಕಣ್ರೋ ಇವತ್ತೇ ಎಕ್ಸಾಮ್ಸ್ ಮುಗಿದಿದಾವೆ ನೀವು ನಾಳೇನೇ ಹೋರಡ್ತೀನಿ ಅಂತಿದಿರಾ ಅಲ್ವಾ.. ಇನ್ನೂ ಒಂದೆರಡು ವಾರ ಇದ್ದು UK ನಲ್ಲಿ ಇನ್ನು ನೀವು ನೋಡದೆ ಇರೋ ಪ್ಲೇಸ್ಗಳನ್ನ ನೋಡ್ಕೊಂಡು ಹೋಗಬಹುದಲ್ವಾ.. ಇಷ್ಟು ಯಾಕೆ ಅರ್ಜೆಂಟ್ ಮಾಡ್ತಿದ್ದಿರಾ.. ಬೇಕಿದ್ರೆ ಶಶಿಧರ್ ಗೆ ನಾನು ಹೇಳ್ತೀನಿ?ಅದಕ್ಕೆ ಜೆಕೆ ವಿನಯ ಪ್ರೋರ್ವಕದಿಂದ ಹೇಳಿದನು "ಇಲ್ಲ ಅಂಕಲ್ ನಾವು ಮನೆಯವರನ್ನು ಇಷ್ಟು ದಿನ ಬಿಟ್ಟು ಇರೋದೇ ದೊಡ್ಡ ವಿಷಯ ನಮ್ಗೆ.. ಇದಕ್ಕೋಸ್ಕರ ಅದೆಷ್ಟು ದಿನ ವೇಟ್ ಮಾಡಿದೀವಿ ಅಬ್ಬಾ ಅದನ್ನ ಹೇಳೋಕೆ ಆಗೋಲ್ಲ, ನಮ್ಮನ್ನು ಕ್ಷಮಿಸಿ ಅಂಕಲ್ ,ನೀವು ಕೂಡಾ ಇಂಡಿಯಾ ಗೆ ಬಂದು ಸೆಟಲ್ ಆಗಬಹುದು ಅಲ್ವಾ??... ಸುಂದರ್ ಮುಖದಲ್ಲಿ ಸಹಜ ಉತ್ಸಾಹ ಸ್ಪಷ್ಟವಾಗಿತ್ತು "ಹಾ!! ನಾನು ಅದೇ ಯೋಚನೆ ಮಾಡ್ತಿದೀನಿ ಕಂಡಿತಾ ಆದಷ್ಟು ಬೇಗ ಬರ್ತೀನಿ "ಸರಿ ಅಂಕಲ್