ಮಾಯಾಂಗನೆ

  • 138

ಬೆಳ್ಳಿಗೆ ಎಂಟೂ ಕಾಲು ಘಂಟೆಯಾಗಿತ್ತು.ಮಂಗಳೂರಿನಿಂದ ಮೈಸೂರಿಗೆ ಹೊರಡುವ KSRTC ಬಸ್ ಈಗಾಗಲೇ ಸ್ಟ್ಯಾಂಡ್‌ನಲ್ಲಿ ಎಂಜಿನ್ ಆನ್ ಮಾಡಿಕೊಂಡು ಸಿದ್ಧವಾಗಿತ್ತು.ಇನ್ನೇನು ಆ ಬಸ್ಸ್ ಮುಂದೆ ಹೋಗಬೇಕು ಆಗ ಒಬ್ಬ ವ್ಯಕ್ತಿ ಓಡಿಕೊಂಡು ಬಂದು ಆ ಬಸ್ಸ್ ಅನ್ನು ಹತ್ತಿದ್ದ.ಅವನು  ಅನುಜ್ ಸೂದ್ , ಆತ ತನ್ನ  ಮನೆಯಿಂದ ಬಸ್ಸ್ ಸ್ಟ್ಯಾಂಡ್ ಗೆ ಬರುವಾಗ ಮದ್ಯದಲ್ಲಿ ಅವನ ಬೈಕ್ ಪಂಚರ್ ರಾಗುತ್ತದೆ .ಅಲ್ಲಿಂದ ಬಸ್ಸ್ ಸ್ಟ್ಯಾಂಡ್ 10-15 ನಿಮಿಷದ ದಾರಿ ಇದ್ದ ಕಾರಣ ಅಲ್ಲಿಂದ  ಓಡಿಕೊಂಡು ಬಂದು ಬಸ್ಸ್ ಹತ್ತಿದ ಪುಣ್ಯಾತ್ಮ .. "ನನ್ನ ಪುಣ್ಯಕ್ಕೆ ಬಸ್ಸ್ ಸಿಕ್ಕಿತು. ಬಸ್ ಮಿಸ್ಸ್ ಆಗಿದ್ರೆ ಸುಮ್ನೆ ಶ್ರೀಮತಿ ( ಹೆಂಡತಿ  ) ಕೈ ಯಿಂದ ಬೈಗುಳ ತಿನ್ನ ಬೇಕಿತ್ತು ..."ಎಂದು ಮನದಲ್ಲಿಯೇ ಯೋಚನೆ ಮಾಡಿದ ....( ಸರಿ ಸುಮಾರು ಮಂಗಳೂರಿನಿಂದ ಮೈಸೂರಿಗೆ ತಲುಪಲು ಸರಾಸರಿ 6 ಗಂಟೆ ತೆಗೆದುಕೊಳ್ಳುತ್ತದೆ . )ಅನುಜ್ ಸೂದ್ ಗೆ ಪ್ರಯಾಣಿಸುವುದೆಂದರೆ ತುಂಬಾ ಕಿರಿಕಿರಿಯಾಗುತಿತ್ತು . ಆದರು ಮೈಸೂರಿಗೆ ತಲುಪುವುದು ಅನಿವಾರ್ಯವಾದರಿಂದ ಬಸ್ಸ್