ಮಿಸ್ಟರ್ ಅಂಡ್ ಮಿಸಸ್ ಸೌರಭಿ

  • 261
  • 90

ಒಂದಲ್ಲ ಎರಡಲ್ಲ ಪೂರ್ತಿ 30 ಲಕ್ಷ ಕೊಡುತ್ತೇನೆ ... 30 ಲಕ್ಷ ಕಡಿಮೆ ಆದರೆ ಇನ್ನೂ ಹತ್ತು ಲಕ್ಷ ಹೆಚ್ಚು ಕೊಡುತ್ತೇನೆ ... ಅದು ಕೂಡ ಕಡಿಮೆ ಆದರೆ ನಿನಗೆ ಏಷ್ಟು ಬೇಕು ಅಂತ ಕೇಳು ನಾನೇ ನಿನಗೆ ಕೊಟ್ಟು ಬಿಡುತ್ತೆ .. ಆದರೆ ಈ ಹಣ ಯಾವಾಗ ಕೊಡುವುದು ಅಂದರೆ ನೀನು ಬಿಂದುಳನ್ನು ಬಿಟ್ಟು ಹೋಗ ಬೇಕು ... ಬಿಟ್ಟು ಹೋಗುವುದು ಮಾತ್ರ ಅಲ್ಲ ಅವಳಿಗೆ ನೀನು ನಂಬಿಕೆ ತರಿಸ ಬೇಕು ನೀನು ಕೇವಲ ಅವಳನ್ನು ಪ್ರೀತಿಸುವಂತೆ ನಾಟಕ ಮಾಡುತ್ತಾ ಇದ್ದೆ ಎಂದು ... ನಿನಗೆ ಅವಳ ಮೇಲೆ ಯಾವುದೇ ರೀತಿ ಪ್ರೀತಿ ಗೀತಿ ಏನು ಇಲ್ಲ ಎಂದು ನೀನು ಹೇಳ ಬೇಕು ... ಹೇಳುವುದು ಮಾತ್ರ ಅಲ್ಲ ಅವಳನ್ನು ನಂಬಿಸ ಬೇಕು ...ಎಂದು ಒಂದು ದೊಡ್ಡ ಹಾಲ್ ಅಲ್ಲಿ ಒಂದು ಸುಂದರವಾದ ಸೋಫಾ ಆ ಸೋಫಾದ ಮೇಲೆ ಕುಳಿತಿದ್ದ ಒಬ್ಬ ವಯಸ್ಸಾದ ವ್ಯಕ್ತಿಯ ಮುಂದೆ ನಿಂತಿದ್ದ  ಹುಡುಗನಿಗೆ ಹೇಳುತ್ತಾನೆ ... ಆ ಮುದುಕ ಸಾಮಾನ್ಯವಾದ ವ್ಯಕ್ತಿ ಅಲ್ಲ ಅವನು