ಇಂತಿ ನಿನ್ನೊಲವಿನ

ಈ ಕಥೆ ಶುರುವಾಗುವುದು ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ. ಅದು ಒಂದು ನಾಲ್ಕು ಕೋಣೆಯ ಸಣ್ಣ ಹಂಚಿನ ಮನೆಯಾಗಿತ್ತು. ಸುತ್ತಲೂ ಪ್ರಕೃತಿ ಮಡಿಲಿನ ನಡುವೆ ಆ ಮನೆ ಇತ್ತು ಅಥವಾ ಇಲ್ಲವೋ ಎಂದು ಕಾಣುತ್ತಿತ್ತು.ಅವರ ಮನೆಯ ಸುತ್ತಲು ಮರ ಗಿಡಗಳು ಇದ್ದುದರಿಂದ ಅವರಿಗೆ ಬೇಸಿಗೆ ಕಾಲದ ಬಿಸಿಲು ಅಷ್ಟೊಂದು ಪರಿಣಾಮ ಬೀರುತ್ತಿರಲಿಲ್ಲ. ಆ ಮನೆ ನೋಡಲು ಸಾಧಾರಣವಾಗಿ ಚಿಕ್ಕಮನೆಯಾಗಿತ್ತು. ಆ ಮನೆ ಹೇಳುವುದಕ್ಕೆ ಚಿಕ್ಕದಾಗಿದ್ದರೂ, ಅದರಲ್ಲಿ ಬರೋಬ್ಬರಿ ಹತ್ತು ಜನ ಇರುತ್ತಿದ್ದರು.ಸಾಧಾರಣವಾಗಿ ಅಂತಹ ಮನೆಯಲ್ಲಿ ಕೇವಲ ನಾಲ್ಕೈದು ಜನ ಇರುವುದು ಸೂಕ್ತ. ಆದರೆ, ಈ ನಾಲ್ಕು ಕೋಣೆಯ ಮನೆಯಲ್ಲಿ ಹತ್ತು ಜನ ಇರುತ್ತಿದ್ದರು. ಅವರು ಎಷ್ಟು ಬಡತನದಲ್ಲಿ ಇದ್ದರೆ ಅಂದರೆ, ಅವರ ಮನೆಯಲ್ಲಿ ಕುಳಿತುಕೊಳ್ಳುವುದಕ್ಕೆ ಒಂದು ಸೋಫಾ ಬಿಡಿ, ಚೇರ್ ಕೂಡ ಇರಲಿಲ್ಲ.ಆ ಮನೆಯಲ್ಲಿ ಇರುವ ಎಲ್ಲರೂ ಮನೆಯ ಹೊರಗೆ ಇರುವ ಜಗಲಿಯನ್ನೇ ಸೋಫಾ ಎಂದುಕೊಳ್ಳುವಷ್ಟು ತೃಪ್ತಿಯಿಂದ ಕುಳಿತುಕೊಳ್ಳುತ್ತಿದ್ದರು. ಜಗಲಿಯ ಒಂದು ಮೂಲೆಯಲ್ಲಿ ಅತ್ತೆ ಬಿಡಿ ಕಟ್ಟುತ್ತಾ ಕುಳಿತಿದ್ದರೆ, ಇನ್ನೊಂದು