ಸಮಾಧಿ ಸಾಂತ್ವಾನ ನೀಡೀತೆ?

  • 192
  • 54

​ನನ್ನ ಹೆಸರು ಸಚಿನ್, ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನನ್ನ ಪ್ರೀತಿಯ ಪತ್ನಿ ರೇಖಾಳನ್ನು ಕಳೆದುಕೊಂಡೆ. ಅವಳು ನನ್ನ ಬದುಕಿನ ಪ್ರತಿಯೊಂದು ಕ್ಷಣದಲ್ಲೂ ಬೆರೆತು ಹೋಗಿದ್ದಳು. ಅವಳ ನಗು, ಅವಳ ಮಾತು, ಅವಳ ಕಣ್ಣುಗಳು ಎಲ್ಲವೂ ನನ್ನ ಜೀವನದ ಭಾಗವಾಗಿದ್ದವು. ಅವಳ ಅಕಾಲಿಕ ಮರಣ ನನ್ನ ಬದುಕಿನಲ್ಲಿ ಒಂದು ದೊಡ್ಡ ಶೂನ್ಯವನ್ನು ಸೃಷ್ಟಿಸಿತ್ತು. ರೇಖಾ ಇಲ್ಲವೆಂಬ ವಾಸ್ತವವನ್ನು ಒಪ್ಪಿಕೊಳ್ಳಲು ನನ್ನ ಮನಸ್ಸು ಸಿದ್ಧವಿರಲಿಲ್ಲ. ಆ ನೋವು ನನ್ನನ್ನು ಒಂದು ಜೀವಂತ ಸಮಾಧಿಯೊಳಗೆ ಮುಚ್ಚಿಟ್ಟಂತೆ ಭಾಸವಾಗುತ್ತಿತ್ತು. ನಾನು ಮೌನವಾಗಿದ್ದೆ, ಕಣ್ಣುಗಳು ಪ್ರತಿದಿನ ಅವಳ ನೆನಪಿನಲ್ಲಿ ಕಣ್ಣೀರು ಹಾಕುತ್ತಿದ್ದವು. ನನ್ನನ್ನು ಸಾಂತ್ವಾನಗೊಳಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ​ನನ್ನ ಸ್ನೇಹಿತ ಮನೋಜ್ ನನ್ನನ್ನು ಸಾಂತ್ವಾನಗೊಳಿಸಲು ಹಲವು ಬಾರಿ ಪ್ರಯತ್ನಿಸಿದ. ಸಚಿನ್, ರೇಖಾಳ ನೆನಪಿನಲ್ಲಿ ನೀನು ಈ ರೀತಿ ಕೊರಗುವುದು ಸರಿಯಲ್ಲ. ಜೀವನ ಮುಂದುವರಿಯಬೇಕು. ಅವಳಿಲ್ಲದೆಯೇ ನೀನು ಬದುಕಬೇಕು. ಅವಳ ಆತ್ಮಕ್ಕೆ ನೆಮ್ಮದಿ ಸಿಗಬೇಕಾದರೆ, ನೀನು ಸಂತೋಷವಾಗಿರಬೇಕು. ಎಂದು ಹೇಳಿದ. ಆದರೆ ಅವನ ಮಾತುಗಳು ನನ್ನ ಮನಸ್ಸಿಗೆ ಮುಟ್ಟಿರಲಿಲ್ಲ.