ಸಾರಿಕೆ ( ಸಾರಿಕೆಯ ಆತ್ಮ ಸುರಭಿ ದೇಹಕ್ಕೆ )

ಇತ್ತ ಕಡೆ ಸಾರಿಕೆ ಎಂಬ ಸುಂದರ ಕನ್ಯೆ . ಅವಳು ಸಣ್ಣಪ್ರಾಯದಲ್ಲಿ ಔಷಧಿಯ ಜ್ಞಾನಕ್ಕೆ ವಿಖ್ಯಾತಿಯನ್ನು ಪಡೆದಿದವಳು. ಅವಳಿಗೆ ವೈದ್ಯಕೀಯ ಜ್ಞಾನ ಅನುವಂಶಿಕವಾಗಿ ಬಂದದ್ದು.ಅಷ್ಟೇ ಅಲ್ಲದೇ ಅವಳಿಗೆ ,ನೃತ್ಯ ಎಂದರೆ ತುಂಬಾ ಪಂಚಪ್ರಾಣ .ಅವಳು ಈಗಾಗಲೇ ನೃತ್ಯ ಕಲೆಯಿಂದ ಎಲ್ಲರ ಮನಸ್ಸನ್ನು ಗೆದ್ದಿದಳು. ಅವಳ ತಾಯಿಯಂತೆ ತನ್ನನ್ನು ತಾನು ಗುರುತಿಸಿಕೊಂಡಿದ್ದಳು.  ನೃತ್ಯವು ಅವಳಿಗೆ ತಾಯಿಯ ಬಳುವಳಿ ಎಂದರೆ ತಪ್ಪಾಗಲಾರದು. ಮಾತಿನಲ್ಲಿ ಗಡಸುತನ, ಏನೇ ಬಂದರೂ ಅದನ್ನು ನಿಭಾಯಿಸುತ್ತೇನೆ ,ಎಂಬ ದೈರ್ಯ. ಇದೆಲ್ಲ ಅವಳಿಗೆ ಅವಳ ತಂದೆ ಕೊಟ್ಟ ಉಡುಗೊರೆಯಾಗಿತ್ತು.ಆದರೆ ಅವಳ ದುರದೃಷ್ಟ ಏನು ಅಂದರೆ , ಅವಳು ಇಲ್ಲಿ ತನಕ ತಂದೆ ತಾಯಿಯನ್ನು ನೋಡಿರಲಿಲ್ಲ. ಮಾತು ಕೂಡ ಆಡಿರಲಿಲ್ಲ. ಅವರ ಬಗ್ಗೆ ತಿಳಿಯುವ ನೂರು ಪ್ರಯತ್ನ ಮಾಡಿದರು ಅದು ವಿಫಲವಾಗಿತ್ತು. ತಂದೆಯ ಸ್ಥಾನದಲ್ಲಿ ಅವಳ ಮಾವ , ಅಂದರೆ ಸಾರಿಕೆಯ ಅಮ್ಮನ, ಅಣ್ಣ ಅವಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾ ಇದ್ದರು. ಹೀಗೆ ಒಂದು ದಿನ, ತಮ್ಮ ಊರಿನಲ್ಲಿ ಇರುವ ಸಾಹುಕಾರಣಿಗೆ ಬಂದ ರೋಗಕ್ಕೆ ಔಷಧಿಯ ಮಾಡಲು ,