ಕಾಣದ ಗರ್ಲ್ ಫ್ರೆಂಡ್ - 1

​ಅದು ಒಂದು ಸಾಮಾನ್ಯವಾದ ಸೋಮವಾರ, ಎಂದಿನಂತೆ ಕೃಷ್ಣ ತನ್ನ ಆಫೀಸ್ ಕೆಲಸದಲ್ಲಿ ಮುಳುಗಿದ್ದೆ. ಅಂದಿನ ಆ ಸಂಜೆ ತನ್ನ ಬದುಕಿನ ದಿಕ್ಕನ್ನೇ ಬದಲಾಯಿಸಬಹುದೆಂದು ಕೃಷ್ಣ ಊಹಿಸಿರಲಿಲ್ಲ. ಕೃಷ್ಣನ  ಫೋನ್‌ಗೆ ಒಂದು ಅಪರಿಚಿತ ಸಂಖ್ಯೆಯಿಂದ ಮೆಸೇಜ್ ಬಂತು. ಅದರಲ್ಲಿ ಕೇವಲ ಹಾಯ್ ಎಂದು ಇತ್ತು. ಕೃಷ್ಣ ಯಾರಿರಬಹುದೆಂದು ಯೋಚಿಸುತ್ತಿರುವಾಗ, ಎರಡನೇ ಮೆಸೇಜ್ ಬಂತು: ಸಾರಿ, ನೀವು ನರೇಶ್ ಅಲ್ವಾ? ಕೃಷ್ಣ ಗೊಂದಲಗೊಂಡು, ಇಲ್ಲ, ನೀವು ತಪ್ಪಾದ ನಂಬರ್‌ಗೆ ಮೆಸೇಜ್ ಮಾಡಿದ್ದೀರಿ ಎಂದು ಉತ್ತರಿಸಿದ.ಕ್ಷಣಾರ್ಧದಲ್ಲಿ ಉತ್ತರ ಬಂತು: ಓಹ್,  ಕ್ಷಮಿಸಿ. ನಿಮ್ಮ ನಂಬರ್ ನೋಡಿದಾಗ ನನ್ನ ಹಳೆಯ ಸ್ನೇಹಿತ ನರೇಶ್‌ರ ನೆನಪಾಯಿತು. ನಾವಿಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದಿದ್ದೆವು. ಅವಳ ಮಾತಿನಲ್ಲಿ ಒಂದು ರೀತಿಯ ನಿಷ್ಕಲ್ಮಶತೆ ಇತ್ತು, ಹಾಗಾಗಿ ಕೃಷ್ಣ, ಪರವಾಗಿಲ್ಲ, ನನ್ನ ಹೆಸರು ಕೃಷ್ಣ ಎಂದು ಹೇಳಿದ. ಆ ನಂತರ ಅವಳು ತನ್ನನ್ನು ತಾನು ಅನು ಎಂದು ಪರಿಚಯಿಸಿಕೊಂಡಳು. ಆ ಕ್ಷಣದಿಂದ ಇಬ್ಬರ ನಡುವೆ ಮಾತುಕತೆ ಶುರುವಾಯಿತು.ಅವಳ ಮೆಸೇಜ್‌ಗಳಲ್ಲಿ ಒಂದು ರೀತಿಯ ಮ್ಯಾಜಿಕ್ ಇತ್ತು.