ಅನು, ನನಗೆ ಸತ್ಯ ಹೇಳು. ನೀನು ಬೇರೆಯವರನ್ನು ಮದುವೆ ಆಗುತ್ತಾ ಇದಿಯಾ? ಹಾಗಾದರೆ ನಮ್ಮಿಬ್ಬರ ಪ್ರೀತಿ ಏನು? ಕೃಷ್ಣನ ಈ ಪ್ರಶ್ನೆಯಿಂದ ಅನು ಒಂದೆರಡು ನಿಮಿಷ ಸುಮ್ಮನಾದಳು. ಅವಳ ಈ ಮೌನ ಕೃಷ್ಣನನ್ನು ಇನ್ನಷ್ಟು ಕಾಡಿತು. ಅವನ ಹೃದಯ ಅಷ್ಟೇ ವೇಗದಲ್ಲಿ ಬಡಿದುಕೊಳ್ಳುತ್ತಿತ್ತು. ಕಡೆಗೂ ಅವಳು ಉತ್ತರಿಸಿದಳು. ಅವಳ ಉತ್ತರ ಕೃಷ್ಣನ ನಿರೀಕ್ಷೆಯ ಎಲ್ಲೆ ಮೀರಿತ್ತು.ಕೃಷ್ಣ, ನೀನು ತುಂಬಾ ಹತಾಶನಾಗಿದ್ದೀಯಾ, ನನಗೆ ಗೊತ್ತಿದೆ. ನನ್ನ ಮದುವೆಯ ಬಗ್ಗೆ ನಿನಗೆ ತಿಳಿದಿರುವ ಸತ್ಯ ಅರ್ಧ ಮಾತ್ರ. ನಾನು ಬೇರೆಯವನನ್ನು ಮದುವೆಯಾಗಿರುವುದು ನಿಜ. ಆದರೆ, ನನ್ನ ಬದುಕು ನನಗೆ ಇಷ್ಟವಿಲ್ಲದ ರೀತಿ ತಿರುವು ಪಡೆದಿದೆ. ಅವಳ ಮಾತುಗಳು ಗೊಂದಲಮಯವಾಗಿದ್ದವು. ಕೃಷ್ಣ ತಕ್ಷಣ, ಅನು, ಏನು ನಡೆಯುತ್ತಿದೆ? ದಯವಿಟ್ಟು ಎಲ್ಲವನ್ನೂ ವಿವರವಾಗಿ ಹೇಳು, ಎಂದು ಕೇಳಿದ.ನಾನು ಚಿಕ್ಕವಳಿದ್ದಾಗಲಿಂದಲೂ ನನ್ನ ಅಣ್ಣ ಲೋಫರ್. ಅವನಿಗೆ ಹಣ ಮತ್ತು ಅಧಿಕಾರವೇ ಮುಖ್ಯ. ನಮ್ಮ ಕುಟುಂಬದ ಹೆಸರು ಅಥವಾ ನಮ್ಮ ಭಾವನೆಗಳು ಅವನಿಗೆ ಮುಖ್ಯವಲ್ಲ. ಆತ ನನ್ನನ್ನು ಮದುವೆ ಮಾಡಲು