ಅನು ಹೇಳಿದ ಕಥೆಯನ್ನು ಕೇಳಿದ ಮೇಲೆ ಕೃಷ್ಣನ ಮನಸ್ಸು ಭಾರವಾಯಿತು. ಅವಳ ಅಣ್ಣನ ಕ್ರೌರ್ಯ, ಅವಳ ಗಂಡನ ಸಾವು, ಮತ್ತು ಅದರ ನಂತರವೂ ನನ್ನ ಜೊತೆಗಿನ ಸಂಪರ್ಕ. ಇದೆಲ್ಲವೂ ಅವನಿಗೆ ಅವಳ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸಿತ್ತು. ಅವಳ ಕಷ್ಟದ ಸಮಯದಲ್ಲಿ ನಾನು ಅವಳ ಜೊತೆ ಇರಬೇಕು ಎಂದು ನಿರ್ಧರಿಸಿದ. ಆದರೆ ಅವನ ಮನಸ್ಸಿನಲ್ಲಿ ಒಂದಿಷ್ಟು ಅನುಮಾನಗಳು ಉಳಿದಿದ್ದವು. ಅವಳು ಯಾಕೆ ನನ್ನನ್ನು ಭೇಟಿ ಮಾಡಲು ನಿರಾಕರಿಸುತ್ತಿದ್ದಳು? ಅವಳು ತನ್ನ ಗಂಡನ ಸಾವಿಗೆ ,ಅವಳ ಅಣ್ಣ ಕಾರಣನಾಗಿರಬಹುದೇ? ಅಥವಾ ಅವಳಿಗೆ ಇನ್ನೂ ಏನಾದರೂ ನೋವಿದೆಯೇ?ಕೃಷ್ಣ ತನ್ನ ಗೆಳೆಯ ರವಿಯ ಬಳಿ ಈ ಕಥೆಯನ್ನು ಹೇಳಿದ. ರವಿ, ಕೃಷ್ಣ, ನೀನು ತುಂಬಾ ಸುಲಭವಾಗಿ ಅವಳನ್ನು ನಂಬುತ್ತಿದ್ದೀಯಾ. ಅವಳು ನಿನಗೆ ಒಂದು ಪ್ರೊಫೈಲ್ ಪಿಕ್ಚರ್ ಕೂಡ ಕಳಿಸಿಲ್ಲ. ನೀನು ಅವಳನ್ನು ನೋಡಿಲ್ಲ, ಅವಳ ಕುಟುಂಬದವರನ್ನು ನೋಡಿಲ್ಲ. ಇದೆಲ್ಲಾ ಒಂದು ದೊಡ್ಡ ಸುಳ್ಳು ಇರಬಹುದು. ನೀನು ಜಾಗರೂಕನಾಗಿರು ಎಂದು ಸಲಹೆ ನೀಡಿದನು.ರವಿಯ ಮಾತುಗಳು ಅವನ ಮನಸ್ಸಿನಲ್ಲಿ