ಕಾಣದ ಗರ್ಲ್ ಫ್ರೆಂಡ್ - 6

​ಕೃಷ್ಣ ಬೆಂಗಳೂರಿನಲ್ಲಿ ಹೋಟೆಲ್ ರೂಮಿನಲ್ಲಿ ಮೊಬೈಲ್ ಚಾರ್ಜ್ ಮಾಡುತ್ತಿರುವಾಗ, ಅಪರಿಚಿತ ಸಂಖ್ಯೆಯಿಂದ ಕರೆ ಬಂತು. ಇನ್ನೇನು ಮಾಡಲಾಗದು, ಅವನು ಫೋನ್ ಎತ್ತಿದ.ಹಲೋ, ನಾನು ಅನುಳ ಅಣ್ಣ ಮಾತಾಡ್ತಾ ಇರೋದು, ಎಂದು ಆ ಕಡೆ ಗಂಭೀರವಾದ ಧ್ವನಿ ಕೇಳಿಸಿತು.ಹೌದು, ಹೇಳಿ ಎಂದು ಕೃಷ್ಣ ಕೇಳಿದ.ನೀನು ನನ್ನ ತಂಗಿಯನ್ನು ನೋಡಲು ಬಂದಿದ್ದೀಯಾ ಅಂತ ನನಗೆ ಗೊತ್ತಾಗಿದೆ. ನೀನು ಯಾರು? ಅವಳು ನಿನ್ನ ಜೊತೆ ಮಾತನಾಡುವುದು ನನಗೆ ಇಷ್ಟವಿಲ್ಲ. ನಿನಗೆ ನನ್ನ ತಂಗಿಯ ಮೇಲೆ ಪ್ರೀತಿ ಇದ್ದರೆ, ಅದನ್ನು ಮರೆತುಬಿಡು. ನನ್ನ ತಂಗಿ ಮದುವೆಯಾಗಿದ್ದಳು ಮತ್ತು ಅವಳಿಗೆ ಗಂಡನೂ ಇದ್ದನು. ನನ್ನ ತಂಗಿಯನ್ನು ನೋಡಲು ನೀನು ಬಂದರೆ ಏನಾಗಬಹುದೆಂದು ನಿನಗೆ ಗೊತ್ತಿಲ್ಲ ಎಂದು ಅವನು ಬೆದರಿಸಿದನು.​ಕೃಷ್ಣ ಕೋಪದಿಂದ, ನನಗೆ ನಿಮ್ಮ ಬಗ್ಗೆ ಅನುಳೇ ಹೇಳಿದ್ದಾಳೆ. ನೀವು ಅವಳಿಗೆ ಎಷ್ಟು ನೋವು ಕೊಟ್ಟಿದ್ದೀರಿ ಅಂತ ನನಗೆ ಗೊತ್ತಿದೆ. ಅವಳನ್ನು ಯಾಕೆ ಇಷ್ಟೊಂದು ಹಿಂಸೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ.​ಆ ಕ್ಷಣ ಅವನ ಧ್ವನಿ ಬದಲಾಯಿತು. ಹೌದು, ನಾನು ಅವಳಿಗೆ