ಅನುಳ ಮೆಸೇಜ್ ನಂತರ ಕೃಷ್ಣನ ಮನಸ್ಸಿನಲ್ಲಿ ಹೊಸ ಉತ್ಸಾಹ ಮೂಡಿತ್ತು. ಅವಳು ಅವನನ್ನು ಭೇಟಿ ಮಾಡಲು ಒಪ್ಪಿಕೊಂಡಿದ್ದಳು. ಅವನು ಆಕೆ ಹೇಳಿದ್ದ ಕೆಫೆಗೆ ಹೊರಟ. ದಾರಿಯುದ್ದಕ್ಕೂ ಅವನ ಮನಸ್ಸಿನಲ್ಲಿ ಅನಿರೀಕ್ಷಿತ ತಿರುವುಗಳು, ರಹಸ್ಯಗಳು, ಮತ್ತು ಕರಾಳ ಘಟನೆಗಳ ಬಗ್ಗೆ ಚಿಂತಿಸುತ್ತಿದ್ದ. ಎಲ್ಲದಕ್ಕೂ ಇಂದು ಉತ್ತರ ಸಿಗುತ್ತದೆಯೇ? ಅವಳು ನಿಜವಾಗಿಯೂ ಯಾರು? ಅವನು ಅವಳನ್ನು ನೋಡಿದಾಗ ಅವನ ಪ್ರತಿಕ್ರಿಯೆ ಏನಾಗಿರಬಹುದು?ಕೃಷ್ಣ ಕೆಫೆಯನ್ನು ತಲುಪಿದ. ಅದು ವಿಮಾನ ನಿಲ್ದಾಣದ ಬಳಿ ಇದ್ದರೂ, ತುಂಬಾ ಜನರಿರಲಿಲ್ಲ. ಅವನು ಒಂದು ಟೇಬಲ್‌ನಲ್ಲಿ ಕುಳಿತು, ಸುತ್ತಲೂ ನೋಡಿದ. ಅಲ್ಲಿ ಒಬ್ಬ ಮಹಿಳೆ ಕುಳಿತಿದ್ದಳು. ಅವಳು ತುಂಬಾ ಸುಂದರಿಯಾಗಿದ್ದಳು. ಅವಳ ಮುಖದಲ್ಲಿ ದುಃಖ ಮತ್ತು ನೋವು ಸ್ಪಷ್ಟವಾಗಿ ಕಾಣುತ್ತಿತ್ತು. ಅವಳು ಅವನ ಕಡೆ ತಿರುಗಿ ನೋಡಿದಾಗ, ಅವವ ಹೃದಯ ಬಡಿತ ಹೆಚ್ಚಾಯಿತು. ಅವಳ ಕಣ್ಣುಗಳು ಕೃಷ್ಣನ ಕಣ್ಣುಗಳಲ್ಲಿ ಒಂದಾದವು. ಆ ಕಣ್ಣುಗಳು ಕೃಷ್ಣ ವಾಟ್ಸ್ಆ್ಯಪ್‌ನಲ್ಲಿ ಮಾತನಾಡುತ್ತಿದ್ದ ಅನುಳ ಕಣ್ಣುಗಳಂತೆಯೇ ಇದ್ದವು.ನೀವು ಕೃಷ್ಣನಾ? ಎಂದು ಆಕೆ ನಿಧಾನವಾಗಿ ಕೇಳಿದಳು.ಹೌದು, ನಾನೇ ಕೃಷ್ಣ.