ಮಹಿ - 3

  • 224
  • 69

ಓ ದೇವ್ರೇ,, ಏನಯ್ಯ ನಿನ್ನ ಲೀಲೆ ಯಾರ್ ಹತ್ತಿರ ಕೂಡ ಹೋಗಬಾರದು ಅಂತ ಇದ್ನೋ, ಕೊನೆಗೆ ನೀನು ಅವರ ಹತ್ತಿರ ನೇ ತಂದು ಕೂರಿಸಿದ್ದೀಯ, ಹೇಗಾದ್ರು ಮಾಡಿ ಈ ಟೀಂ ನಿಂದ ಅವಳಿಂದ ನನ್ನ ದೂರ ಕಳಿಸಯ್ಯ, ನಾಳೇನೇ ನಿನ್ನ ದೇವಸ್ಥಾನ ಕ್ಕೆ ಬಂದು ಪೂಜೆ ಮಾಡಿಸಿ 101 ರೂಪಾಯಿ ಕಾಣಿಕೆ ಹಾಕ್ತಿನಿ, ಅಂತ ಮನಸಲ್ಲಿ ದೇವರಿಗೆ ಬೇಡಿಕೊಳ್ತಾ ಇದ್ದೆ, ಬಟ್ ದೇವ್ರು ಯಾಕೋ ನನ್ನ ಬೇಡಿಕೆ ಕೇಳಿಲ್ಲ ಅಂತ ಅನ್ನಿಸುತ್ತೆ, ಹಲೋ ಮಿಸ್ಟರ್ ಎಸ್ಕ್ಯೂಸ್ ಮೀ ಅನ್ನೋ ಧ್ವನಿ ಕೇಳ್ತು. ತಲೆ ಬಗ್ಗಿಸಿಕೊಂಡು ಇದ್ದವನು ತಲೆ ಎತ್ತಿ ತಿರುಗಿ ನೋಡಿದೆ, ಅಕಿರಾ ಒಂದು ಫೈಲ್ ಇಡ್ಕೊಂಡು ನಿಂತಿದ್ದಾಳೆ.ನಾನು ನಾಟಕೀಯ ವಾಗಿ ನಗ್ತಾ, ಎದ್ದು ಹೇಳಿ ಮೇಡಂ ಅಂತ ಹೇಳ್ದೆ.ಅಕಿರಾ ಕೋಪದಿಂದ ನೋಡ್ತಾ, ಹಲೋ ಮಿಸ್ಟರ್ ನಾನೇನು ನಿನಗೆ ಕಾಮಿಡಿ ಮಾಡ್ತಾ ಇದ್ದೀನ ಹಾಗೇ ನಗ್ತಾ ಇದ್ದೀರಾ, ಅಂತ ಕೇಳಿದ್ಲು.ಅಯ್ಯೋ ಇಲ್ಲಾ ಮೇಡಂ ಯಾರ್ ಹೇಳಿದ್ದು ಹಾಗೇ.ಮತ್ತೆ ನಗ್ತಾ ಇದ್ದೀರಾ ಏನಕ್ಕೆ