ಬೆಳಿಗ್ಗೆ ಎದ್ದು ಆಫೀಸ್ ಗೆ ರೆಡಿ ಆಗಿ ತಿಂಡಿ ತಿಂದು ಆಫೀಸ್ ಗೆ ಹೋಗೋಣ ಅಂತ ಹೇಳಿ ಬೈಕ್ ಕೀ ತೆಗೆದುಕೊಂಡು ಹೊರಗೆ ಬಂದೆ, ಹೊರಗಡೆ ಯಿಂದ ಮನೆ ಒಳಗೆ ಬರ್ತಾ ಇದ್ದಾ ಅಪ್ಪ ನನ್ನ ನೋಡಿ ಒಂದು ಸ್ಮೈಲ್ ಮಾಡಿ, ನನ್ನ ಹತ್ತಿರ ಬಂದು ಆಫೀಸ್ ಗೆ ಹೋಗ್ತಾ ಇದ್ದಿಯಾ ಅಂತ ಕೇಳಿದ್ರು,, ಹೌದಪ್ಪ ಅಂತ ಹೇಳಿದೆ. ಅಪ್ಪ ಕೈ ಮುಂದೆ ಮಾಡು ಅಂತ ಹೇಳಿದ್ರು. ನಾನು ಸರಿ ಅಂತ ಹೇಳಿ ನನ್ನ ಕೈ ನಾ ಅವರ ಮುಂದೆ ಚಾಚಿದೆ. ಅಪ್ಪ ಅವರ ಶರ್ಟ್ ಜೇಬಿನಿಂದ ಒಂದು ವಸ್ತು ನಾ ಹೊರಗೆ ತೆಗೆದರು. ನಾನು ಏನು ಅಂತ ನೋಡಿದೆ, ನೋಡಿದ್ರೆ ಟೈಟಾನ್ ವಾಚ್ ನೋಡಿ ತುಂಬಾ ಖುಷಿ ಆಯ್ತು,,, ಅಪ್ಪ ನೇ ನನ್ನ ಕೈಗೆ ಹಾಕ್ತಾ, ನನಗೆ ಗೊತ್ತು ನೀನು ಏನು ನನ್ನ ಕೇಳೋದಿಲ್ಲ ಅಂತ ನಿನಗೆ ತಗೋಳೋಕು ಇಷ್ಟ ಇಲ್ಲಾ, ಅದು ನನಗು ಸಂತೋಷ ನೇ ಬೆಳೆದು ನಿಂತ