ಮಧ್ಯಾಹ್ನ ಲಂಚ್ ಮಾಡಿ ಹೊರಗೆ ಬರ್ತಾ ಶಿಲ್ಪಾ ಗೆ ಹೇಳಿದೆ ಅಕಿರಾ ಜೊತೆ ಮಾತಾಡಬೇಕು ಅಂತ. ಶಿಲ್ಪಾ ಲೋ ಅದಕ್ಕೆ ನನ್ನ ಕೇಳೋದು ಏನಕ್ಕೆ ಮಾತಾಡು ಅಂತ ಹೇಳಿ ಮುಂದೆ ಹೋಗೋಕೆ ಹೋದ್ಲು. ನಾನ್ ಅವಳ ಕೈ ಇಡಿದು ಏನ್ ಕಾಮಿಡಿ ನಾ ಅಂತ ಕೇಳ್ದೆ ಅವಳನ್ನ. ಶಿಲ್ಪಾ ಏನೋ ನಿಂದು ಇವಾಗ ಏನು ಅವಳ ಜೊತೆ ಮಾತಾಡಬೇಕು ಅಷ್ಟೇ ಅಲ್ವಾ ಅಂತ ಹೇಳಿ ಮುಂದೆ ಹೋಗ್ತಾ ಇದ್ದಾ ಅಕಿರಾ ನಾ ಲೇ ಅಕಿರಾ ಮಹಿ ನಿನ್ ಹತ್ತಿರ ಏನೋ ಮಾತಾಡಬೇಕು ಅಂತೇ ಇರು ಅಂತ ಹೇಳಿದ್ಲು. ಅಕಿರಾ ಅ ಮಾತಿಗೆ ನಿಂತು ಹಿಂದೆ ತಿರುಗಿ ಕೈ ಕಟ್ಟಿಕೊಂಡು ನನ್ನ ನೋಡ್ತಾ ಏನ್ ಮಾತಾಡಬೇಕು ಅಂತ ಸ್ವಲ್ಪ ಸೀರಿಯಸ್ ಆಗಿ ನೋಡ್ತಾ ಕೇಳಿದ್ಲು. ನಾನ್ ಅವಳ ಮುಂದೆ ನಿಂತು ನನ್ನ ನಂಬರ್ ಗೆ ದುಡ್ಡು ಏನಕ್ಕೆ ಕಳಿಸಿದೆ ಅಂತ ಕೇಳ್ದೆ. ಅಕಿರಾ ಏನು ನಾನು ನಿನ್ ನಂಬರ್ ಗೆ ದುಡ್ಡು ಕಳಿಸಿದ್ನ