ಅಕಿರಾ ಶಿಲ್ಪಾ ಹತ್ತಿರ ಹಾಗೇ ಮಾತಾಡಿದ್ರು, ವಿನೋದ್ ಮಾತಾಡಿದ ಪ್ರತಿಯೊಂದು ಮಾತನ್ನ ತುಂಬಾ ಸೀರಿಯಸ್ ಆಗಿ ತಗೊಂಡು, ಮಗನೆ ಒಂದಲ್ಲ ಒಂದು ದಿನ ಹೊರಗೆ ಸಿಗತಿಯ, ನಮ್ಮಕ್ಕ ನಾ ಮಾತಿಗೆ ಸುಮ್ನೆ ಏನು ಮಾತಾಡದೆ ಇದ್ದೀನಿ ಇಲ್ಲಾ ಅಂದಿದ್ರೆ ಮಗನೆ ನಿನಗೆ ನಾನ್ ಏನು ಅಂತ ತೋರಿಸ್ತಾ ಇದ್ದೆ ಅಂತ ಅನ್ಕೊಂಡು, ವರ್ಕ್ ಮಾಡ್ತಾ ಕೂತಿದ್ದೆ. ಸಂಜೆ ವರ್ಕ್ ಮುಗಿದ ಮೇಲೆ ಶಿಲ್ಪಾ ಗೆ ಬೈ ಹೇಳಿ ಹೊರಟು ಹೋದೆ. 2 ಡೇಸ್ ಜಸ್ಟ್ ಹಾಯ್ ಬೈ ಅಂತ ನೇ ಇದ್ದು ಬಿಟ್ಟೆ. ಶಿಲ್ಪಾ ನೈಟ್ ಟೈಮ್ ಮೆಸೇಜ್ ಕಾಲ್ ಮಾಡ್ತಾ ಇದ್ಲು ಬಟ್ ಹರಿಣಿ ಅಕ್ಕ ಫಂಕ್ಷನ್ ಗೆ ಎಲ್ಲಾ ನಾನೆ ಓಡಾಡ್ತಾ ಇದ್ದೆ ಸೋ ಅ ಬ್ಯುಸಿ ಅಲ್ಲಿ ಅಷ್ಟಾಗಿ ಗಮನ ಕೊಡಲಿಲ್ಲ . ಮಧ್ಯಾಹ್ನ ನಾ ಹೊರಗಡೆ ಹೋಗಿ ಲಂಚ್ ಮಾಡ್ಕೊಂಡು ಆಫೀಸ್ ಗೆ ಬಂದೆ, ಶಿಲ್ಪಾ ಅಕಿರಾ ಇಬ್ರು ಏನೋ ಮಾತಾಡ್ಕೋತ ಇದ್ರು, ಗಮನ ಕೊಡಲಿಲ್ಲ