ಮಹಿ - 14

   ಎಲ್ಲಾ ಟೈಮ್ ಅಲ್ಲಿ ನಾವು ಅಂದುಕೊಂಡ ಹಾಗೇ ಇರೋದು ಇಲ್ಲಾ ಅಂತಾರೆ ಅಲ್ವಾ, ಹಾಗೇ ವಿನೋದ್ ಮುಂದೆ ನಾನ್ ಎಷ್ಟೇ ತಗ್ಗಿ ಬಗ್ಗಿ ನಡೆದರು ಕೊನೆಗೆ ಅವನ ಬುದ್ದಿ ತೋರಿಸೇ ಬಿಟ್ಟ.  ಒಂದು ದಿನ ಆಫೀಸ್ ಗೆ ಬಂದೆ ರಿಸೆಪ್ಶನಿಸ್ಟ್  ನನ್ನ ನೋಡಿ ಮಿಸ್ಟರ್ ಮಹಿ ಅಂತ ಕರೆದ್ಲು. ನಾನು ಅವರ ಹತ್ತಿರ ಹೋಗಿ ಅ ಹೇಳಿ ಮೇಡಂ ಅಂತ ಹೇಳ್ದೆ. ಮಹಿ ನೀವು ಬಂದ್ರೆ  ಇಲ್ಲೇ ಇರೋಕೆ ಹೇಳಿದ್ರು ಮ್ಯಾನೇಜರ್ ಅಂತ ಹೇಳಿದ್ರು. ನಾನು ಇಲ್ಲೇ ಇರಬೇಕಾ ಏನಕ್ಕೆ ಮೇಡಂ ಅಂತ ಕೇಳ್ದೆ. ಅವರು ಡಲ್ ವಾಯ್ಸ್ ಅಲ್ಲಿ ಮಾತಾಡ್ತಾ ಸಾರೀ ಮಹಿ ನಿಮ್ಮನ್ನ ಕೆಲಸದಿಂದ ಟರ್ಮಿನೇಟ್ ಮಾಡಿದ್ದಾರೆ ಅಂತ ಹೇಳಿದ್ರು. ನಾನು ಅವರ ಮುಖ ನೋಡಿದೆ ಪಾಪ ತುಂಬಾ ಬೇಜಾರಾಗಿ ಇದ್ರು. ನಾನು ಕೂಲ್ ಆಗಿ ಪರ್ವಾಗಿಲ್ಲ ಬಿಡಿ ಮೇಡಂ ಅದಕ್ಕೆ ನೀವ್ ಯಾಕೆ ಬೇಜಾರ್ ಆಗ್ತೀರಾ ಅಂತ ಹೇಳ್ದೆ. ಅವರು ಮಾತಾಡ್ತಾ ಇಲ್ಲಾ ಮಹಿ ನಿಮ್ಮನ್ನ