ಕೋಮಲಿ ಅವರು ಹೇಳಿದ ಮಾತಿಗೆ ಅಕಿರಾ ಕೋಪ ಮಾಡಿಕೊಂಡು ಅವಳ ರೂಮ್ ಗೆ ಹೊರಟು ಹೋದಳು. ಅಕಿರಾ ಹೋದಮೇಲೆ ವಿವೇಕ್ ಮಾತಾಡ್ತಾ ಮತ್ತೆ ಏನ್ ಸಮಾಚಾರ ಮಹಿ ಅಂತ ಕೇಳಿದ್ರು. ಅದೇ ಸಮಯಕ್ಕೆ ಸರಿಯಾಗಿ ಅಕಿರಾ ಅವರ ಅಜ್ಜಿ ತಾತ ಇಬ್ರು ರೂಮ್ ಯಿಂದ ಹೊರಗೆ ಬರ್ತಾ ಹಾಲ್ ಅಲ್ಲಿ ನನ್ನ ನೋಡಿ, ತಾತ ಮಾತಾಡ್ತಾ ಮಹಿ ಯಾವಾಗಪ್ಪ ಬಂದೆ ಅಂತ ಕೇಳಿದ್ರು. ವಿವೇಕ್ ಮಾತಾಡ್ತಾ ಅಪ್ಪ ಬಂದಿದ್ದು ಅಲ್ಲ ಕರ್ಕೊಂಡು ಬಂದಿದ್ದು ಅಂತ ಹೇಳಿದ್ರು. ತಾತ ಕರ್ಕೊಂಡು ಬಂದ ಅಂತ ಪ್ರಶ್ನಾರ್ಥಕವಾಗಿ ಕೇಳಿದ್ರು. ಹೌದು ಅಪ್ಪ ಸೂಪರ್ ಮಾರ್ಕೆಟ್ ಗೆ ನಾನು ಕೋಮಲಿ ಹೋಗಿ ಬರ್ತಾ ಹೊರಗೆ ಮಹಿ ಕಾಣಿಸಿದ ಮನೆಗೆ ಬಾ ಅಂತ ಕರೆದ್ರು ಕೆಲಸ ಇದೆ ಮತ್ತೆ ಯಾವಾಗಾದ್ರೂ ಬರ್ತೀನಿ ಅಂತ ಹೋಗೋಕೆ ನೋಡಿದ ನಿಮ್ ಸೊಸೆ ಬಿಡಲೇ ಇಲ್ಲಾ ಕರ್ಕೊಂಡು ಬಂದ್ರು ಅಂತ ಹೇಳಿದ್ರು. ತಾತ ಮಗನ ಮಾತಿಗೆ ಏನಪ್ಪ ಮಹಿ,