ಪ್ರೇಮ ಜಾಲ (love is blind) - 2

ಅಧ್ಯಾಯ ೨ಗಾಢ ಕತ್ತಲಲ್ಲಿ ಅವನ ಆಕ್ರಂದನದ ಆರ್ಭಟ ಗುಡುಗಿನಂತೆ ಕೇಳಿಸುತ್ತಿತ್ತು. ಸುತ್ತಲೂ ಬಿರುಗಾಳಿಯನ್ನೇ ತರಿಸುವಂತೆ “ಸಾರಿಕಾ… ಸಾರಿಕಾ…” ಎನ್ನುವ ಅವನ ಕೂಗು ಪ್ರತಿಧ್ವನಿಸುತ್ತಿತ್ತು.ಪ್ರಜ್ಞೆ ತಪ್ಪಿ ಅವನ ಬಾಹುಗಳಲ್ಲಿ ಬಿದ್ದಿದ್ದ ಸಾರಿಕೆಯನ್ನು ತಬ್ಬಿಕೊಂಡ ಅವನು ಆಕಾಶದ ಕಡೆ ಮುಖ ಮಾಡಿದ. ಆಗಸದ ಮೇಲ್ಭಾಗದಲ್ಲಿ ಅಡಗಿಕೊಂಡಿದ್ದ ಕಾರ್ಮೋಡಗಳು ಕ್ಷಣದಲ್ಲಿ ಸರಿದು, ಮರೆಯಾಗಿದ್ದ ಪೂರ್ಣಚಂದ್ರನ ಕಿರಣಗಳು ಅವನ ಮೇಲೆ ಸುರಿದವು.ಚಂದ್ರಕಿರಣಗಳು ಅವನ ಅನಿಯಂತ್ರಿತ ಮೃಗರೂಪದ ಮೇಲೆ ಬಿದ್ದ ತಕ್ಷಣ ಅವನ ರೂಪ ನಿಧಾನವಾಗಿ ಬದಲಾಗತೊಡಗಿತು. ಕೋರೆ ಹಲ್ಲುಗಳು ಮಾಯವಾಗಿ, ಕೆಂಪು ಕಣ್ಣುಗಳು ಮಂಕಾಗಿ, ಅರ್ಧ ಪಿಶಾಚಿಯ ರೂಪದಿಂದ ಅವನು ತನ್ನ ನಿಜವಾದ ಸುಂದರ ತರುಣನ ರೂಪಕ್ಕೆ ಮರಳಿದ. ಆದರೆ ಅವನ ಬೆನ್ನಿನ ಹಿಂದೆ ಇನ್ನೂ ಗರಿಗೆದರುತ್ತಿದ್ದ ಕಪ್ಪು ಬೃಹತ್ ರೆಕ್ಕೆಗಳು ಅವನ ದಾನವಸ್ವಭಾವವನ್ನು ನೆನಪಿಸುತ್ತಿದ್ದವು. ರೆಕ್ಕೆಗಳನ್ನು ಚಾಚಿಕೊಂಡು ಅವನು ಕ್ಷಣದಲ್ಲಿ ಆಕಾಶಕ್ಕೆ ಎದ್ದನು.@@@@@“ಏ ವಿಹಾನ್! ಇವಳನ್ನು ಇಲ್ಲಿ ಯಾಕೆ ತಂದು ಬಿಟ್ಟಿದ್ದೀಯಾ?” ಎಂದಳು ಮಾಯಾ, ಕೋಪದಿಂದ ಅವನನ್ನು ದಿಟ್ಟಿಸಿಕೊಂಡು.ವಿಹಾನ್ ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು, ಮಾಯಾದ ಮಾತಿನ