ಅಧ್ಯಾಯ 3ರಕ್ತ ಪಿಶಾಚಿಗಳ ಕಾಲ ಯಾವಾಗ ಶುರುವಾಯಿತು ಹೇಳುವುದು ಅಸಾಧ್ಯ .. ದೈವ ದಾನವರ ಜನನ ಸೃಷ್ಟಿಯ ಮೊದಲ ಹಂತದಲ್ಲಿಯೇ ದಾನವರ ಪಂಗಡದಲ್ಲಿ ರಕ್ತ ಪಿಶಾಚಿಗಳ ಜನನವು ಕೂಡ ಆಗಿತ್ತು.. ಮನುಷ್ಯರ ರಕ್ತ ಹೀರುವ ಪಿಶಾಚಿಗಳು ಅಂದಿನಿಂದ ಇಂದಿನವರೆಗೂ ರಕ್ತ ಪಿಶಾಚಿಗಳು ತಮ್ಮದೇ ಅಧಿಪತಿ ಸಾಧಿಸಿಕೊಂಡು ಬಂದಿದ್ದಾರೆ..ಪಾತಾಳ ಲೋಕದ ದಾನವರೆಲ್ಲರೂ ತಮ್ಮ ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಭೂಲೋಕದಲ್ಲಿ ಆಹಾಕಾರ ಸೃಷ್ಟಿ ಮಾಡಿದರು ಕೆಲವೊಬ್ಬರು ದೈವ ಮಾನವರು ಇಂತಹ ದಾನವರನ್ನು ಸೋಲಿಸಿ ಭೂಲೋಕದಿಂದ ಪಾತಳ ಲೋಕದ ಕಡೆ ತಳ್ಳಲ್ಪಟ್ಟರು. ಇನ್ನು ಕೆಲವು ದಾನವರನ್ನು ನಾಶ ಮಾಡಿದರು ಇನೆಂದಿಗೂ ಪಾತಾಳ ಲೋಕದಿಂದ ಭೂಲೋಕಕ್ಕೆ ಬಂದು ಸಾಮಾನ್ಯರಿಗೆ ತೊಂದರೆ ಕೊಡದಿರುವಂತೆ ರಕ್ತ ಪಿಶಾಚಿಗಳನ್ನು ಬಂಧಿಸಿದರು ಆ ಲೋಕದ ಸುತ್ತಲೂ ದಿಗ್ಬಂಧನವನ್ನು ಹೂಡಿದರು ಇದರಿಂದ ಸಾಮಾನ್ಯರು ನಿಶ್ಚಿಂತೆಯಿಂದ ಜೀವಿಸಲು ಸಾಧ್ಯವಾಯಿತು...ಕಾಲ ಉರುಳಿದಂತೆ ದೈವ ಮಾನವರ ಯುಗ ಮುಗಿದು ಅಲ್ಲಲ್ಲಿ ಒಂದಿಷ್ಟು ದೈವ ಮಾನವರು ಹೆಸರಿಗೊಂದಿಷ್ಟು ಜನ ಮಾತ್ರ ಉಳಿದರು ... ಇನ್ನು ಋಣಾತ್ಮಕತೆಯ ಅಸ್ತಿತ್ವ ಎಲ್ಲಾ ಕಡೆಯೂ