ಕೃತಿ ಜೊತೆಗೆ ಮಾತಾಡಿ ಅವಳನ್ನ ಕಳಿಸಿ ಕೊಟ್ಟು ಸೀದಾ ಅಕಿರಾ ಅವರ ಮನೆಗೆ ಬಂದೆ. ಅಕಿರಾ ಮನೆ ಒಳಗೆ ಹೋಗ್ತಾ ಇದ್ದಾ ಹಾಗೇ ಅಕಿರಾ ಎದ್ದು ಓಡಿ ಬಂದು ನನ್ನ. ಮುಂದೆ ನಿಂತಳು. ನಾನು ಅವಳ ಮುಖ ನೋಡಿದೆ ಒಂದು ಕಡೆಗೆ ಸಂತೋಷ ಇನ್ನೊಂದು ಕಡೆ ಏನನ್ನೋ ಹೇಳಬೇಕು ಅನ್ನೋ ಆತುರ. ನಾನು ಅವಳನ್ನ ನೋಡಿ ಏನಾಯ್ತು ಅಂತ ಕೇಳ್ದೆ. ಅಕಿರಾ ಮಹಿ ವಿನೋದ್ ನ ಮತ್ತೆ ಅವರ ಅಪ್ಪ ನ ಪೊಲೀಸ್ ಅರೆಸ್ಟ್ ಮಾಡಿದ್ರು ಅಂತ ನ್ಯೂಸ್ ಬಂತು ಅಂತ ಹೇಳಿದ್ಲು. ಪ್ರಾಬ್ಲಮ್ ಆಗಿದ್ದು ಅವರಿಂದ ಅದನ್ನ ಕೃತಿ ಮೇಡಂ ನಂಬಿ ನಿನಗೆ ಅ ರೀತಿ ಹೇಳಿದ್ರು. ಪ್ಲೀಸ್ ನಿಮ್ ಕಂಪನಿ ಗೆ ಏನು ರಿಪೋರ್ಟ್ ಮಾಡೋಕೆ ಹೋಗಬೇಡ ಬೇಕಾದ್ರೆ ಅಶೋಕ್ ಸರ್ ಹತ್ತಿರ ನಾನ್ ಮಾತಾಡ್ತೀನಿ ಪ್ಲೀಸ್ ನೀನು ಏನಾದ್ರು ಅ ರೀತಿ ಮಾಡಿದ್ರೆ ಇಡೀ ಕಂಪನಿ ಬ್ಯಾಡ್ ಆಗುತ್ತೆ ಅಂತ ಹೇಳಿದ್ಲು. ನಾನು ಅದೇ ವಿಷಯ