ಅಕಿರಾ ಗೆ ಮನೇಲಿ ಮಹಿ ಅಪ್ಪ ಅಮ್ಮ ಅಕ್ಕ ಮಾತಾಡಿದ ಪ್ರತಿಯೊಂದು ವಿಷಯ ಹಾಗೇ ತಲೇಲಿ ಕೊರಿಯಿಕೆ ಶುರುವಾಯ್ತು. 7 ತಿಂಗಳ ಹಿಂದೆ ಜಸ್ಟ್ ಒಬ್ಬ ಲೊ ಲೆವೆಲ್ ಎಂಪ್ಲೋಯ್ ಆಗಿ ನನ್ನ ಟೀಂ ಅಲ್ಲಿ ವರ್ಕ್ ಮಾಡ್ತಾ ಇದ್ದವನು. ವಿನೋದ್ ಹತ್ತಿರ ಭಿಕಾರಿ ಅಂತ ಬೈಸ್ಕೊಂಡವನು ಇವತ್ತು ಅವನದೇ ಅದ ಒಂದು ಐಡೆಂಟಿಟಿ ಪಡ್ಕೊಂಡು ಇದ್ದಾನೆ. ಒಂದು ಕಂಪನಿ ಗೆ ಡೈರೆಕ್ಟರ್ ಆಗಿ ಇದ್ದಾನೆ ಅದು ಸಾಮಾನ್ಯ ಕಂಪನಿ ಅಲ್ಲ ಈಗ ಇಂಡಿಯದಲ್ಲಿ ಒನ್ ಆಫ್ ದಿ ಟಾಪ್ ಟೆಕ್ಸ್ಟ್ ಟೈಲ್ ಬ್ರಾಂಡ್ ಕಂಪನಿ ಓನರ್. ಶ್ರೀಮಂತನ ಮಗ ಆದ್ರು ಬಡವ ಅಂತ ಹೇಳ್ಕೊಂಡು ಹಾಗೇ ಇದ್ದಾ. ಇವತ್ತು ಒಂದು ಕಂಪನಿ ನ ಮುಚ್ಚೋ ಲೆವೆಲ್ ಗೆ ಮಾತಾಡಿದ. ಕಂಪನಿ ಓನರ್ ಮಗಳೇ ಬಂದು ಸಾರೀ ಕೇಳೋ ಹಾಗೇ ಮಾಡಿದ. ಕೇಳಿದ್ರೆ ಏನೋ ಕಥೆ ಹೇಳಿದ. ಇಷ್ಟೊಂದು ವಿಷಯ ಮುಚ್ಚಿ ಇಡೋ ಅವಶ್ಯಕತೆ ಏನಿದೆ. ನನಗಂತೂ