ಮಹಿ - 38

  • 180
  • 69

       ಅಡುಗೆ ಮನೇಲಿ ಕೆಲಸ ಮಾಡ್ತಾ, ಈ ಮನೇಲಿ ನನ್ನಾ ಮಾತಿಗೆ ಬೆಲೆ ಎಲ್ಲಿದೆ? ಅವರವರ ಇಷ್ಟ ಬಂದಹಾಗೆ ಮಾಡ್ತಾ ಇದ್ದಾರೆ. ಸುಮ್ನೆ ನೆಪಕ್ಕೆ ಅಷ್ಟೇ ನಾನು ಈ ಮನೇಲಿ ಇರೋದು, ಒಬ್ಬರಾದ್ರೂ ನನ್ನ ಮಾತನ್ನ ಕೇಳೋದು ಅಲ್ಲ ಏನು ಅಂತ ಕೇಳೋಕೂ ಯಾರಿಗೂ ಇಷ್ಟ ಇಲ್ಲಾ. ಮಕ್ಕಳು ಗಂಡ ಅಂತ ಅವರ ಸೇವೆ ನೇ ಮಾಡ್ಕೊಂಡು ಇದ್ದಾ ನನಗೆ ಸರಿಯಾಗಿ ಪಾಠ ಕಲಿಸಿದ್ರು. ಇಷ್ಟೇ ಅಲ್ಲ ಇನ್ನು ಆಗಬೇಕು ನನಗೆ, ಈ ಮನೇಲಿ ಕೇವಲ ನಾನು ಕೆಲಸದವಳಾಗಿ ಇದ್ದು ಬಿಟ್ಟಿದ್ದೀನಿ, ಇನ್ನ ಸ್ವಲ್ಪ ದಿನ ಹೋದ್ರೆ ಅಪ್ಪ ಮಕ್ಕಳು ನನ್ನ ಮನೆಯಿಂದ ಹೊರಗೆ ಹಾಕಿದ್ರು ಹಾಕ್ತಾರೆ ಅಂತ ಬೈಕೊಂಡು ಇರೋ ಅಮ್ಮನ ಮಾತನ್ನ ಕೇಳಿಸಿಕೊಂಡು ಶ್ವೇತಾ ಅಡುಗೆ ಮನೆ ಒಳಗೆ ಬಂದು ಅಮ್ಮ ಏನಾಯ್ತು ಅಂತ ಹೀಗೆ ಏನೇನೋ ಮಾತಾಡ್ತಾ ಇದ್ದಿಯಾ ಯಾರಾದ್ರೂ ಏನಾದ್ರು ಅಂದ್ರ ನಿನ್ನ ಅಂತ ಕೇಳಿದ್ಲು. ಶ್ವೇತಾ ಮಾತಿಗೆ ಅಮ್ಮ ಮಾತಾಡ್ತಾ ಯಾರ್