ಸಂಜೆ ಇಬ್ಬರು ಕ್ಲಾಸ್ ಮುಗಿಸಿಕೊಂಡು ಹೊರಗೆ ಬಂದ್ವಿ ಸೀತಾ ಅವರ ಕಾರ್ ಡ್ರೈವರ್ ಗೆ ಕಾಲ್ ಮಾಡಿ ಬರೋಕೆ ಹೇಳಿದ್ರು. 5 ನಿಮಿಷದಲ್ಲಿ ಕಾರ್ ಬಂತು. ಇಬ್ಬರು ಕಾರ್ ಅಲ್ಲಿ ಕೂತು ಫುಡ್ ಸ್ಟ್ರೀಟ್ ಗೆ ಬಂದ್ವಿ. ಇಬ್ಬರು ಕಾರ್ ಇಳಿದ್ವಿ. ಸೀತಾ ಮಹಿ ಬನ್ನಿ ಅಂತ ಕರೆದ್ಲು. ನಾನು ರೆಸ್ಟೋರೆಂಟ್ ನ ನೋಡಿ ಏನ್ರಿ ಪಾನಿಪುರಿ ಗೆ ಅಂತ ಹೇಳಿ ಯಾವುದೊ ಕಾಸ್ಟ್ಲಿ ರೆಸ್ಟೋರೆಂಟ್ ಗೆ ಕರ್ಕೊಂಡು ಹೋಗ್ತಾ ಇದ್ದೀರಾ ಅಂತ ಕೇಳ್ದೆ. ಫಸ್ಟ್ ಟೈಮ್ ನಿಮ್ ಜೊತೆ ಹೊರಗೆ ಬಂದೆ ಅಲ್ವಾ ಅದಕ್ಕೆ ಇದು ನನ್ನಕಡೆಯಿಂದ ಚಿಕ್ಕ ಟ್ರೀಟ್ ಅಂತ ಹೇಳಿದ್ಲು. ಅವಳಿಗೆ ನಿರಾಶೆ ಮಾಡೋದು ಬೇಡ ಅಂತ ಸರಿ ನೀವು ನಡೀರಿ ನಾನ್ ಬರ್ತೀನಿ ಅಂತ ಹೇಳ್ದೆ. ಯಾಕೆ ಏನಾಯ್ತು ಅಂತ ಕೇಳಿದ್ಲು. ನಾನು ಏನಿಲ್ಲಾ ಸರಿ ನೀವು ಇಲ್ಲೇ ಇರಿ ಅಂತ ಹೇಳಿ ಕಾರ್ ಹತ್ತಿರ ಹೋಗಿ ಡ್ರೈವರ್ ಸರ್ ನ ಸರ್ ಬನ್ನಿ