ನಿಮಗೆ ಅನ್ನಿಸಬಹುದು ಎಲ್ಲೋ ಬೆಂಗಳೂರಲ್ಲಿ ಇದ್ದವನು ದೆಹಲಿ ಗೆ ಬಂದು ಕಾಲೇಜ್ ಓದ್ತಾ ಯಾರೋ ಮೂರು ದಿನದ ಪರಿಚಯಕ್ಕೆ ಅವರು ಕೇಳಿದ್ರು ಅಂತ ಅವರಿಗೋಸ್ಕರ ಏನಕ್ಕೆ ಇಷ್ಟು ಕೆಲಸ ಮಾಡ್ತಾ ಇದ್ದೀನಿ ಅಂತ, ಕಾರಣ ಇಲ್ಲದೆ ಯಾರು ಏನು ಮಾಡೋದಕ್ಕೆ ಹೋಗೋದಿಲ್ಲ, ಕಾರಣ ಇದೆ ಅದನ್ನ ಸಂದರ್ಭ ಬಂದಾಗ ಹೇಳ್ತಿನಿ. ಸಂಜೆ ಕಾಲೇಜ್ ಮುಗಿದ ಮೇಲೆ ಎಲ್ಲರೂ ಫ್ಲಾಟ್ ಗೆ ಬಂದ್ವಿ. ಸೀತಾ ಪಾಯಲ್ ಮೋನಿಕಾ ಬಿಪ್ಪನ್ ಸಿಂಗ್ ಮತ್ತೆ ಹಾಸ್ಟೆಲ್ ರೂಮೇಟ್ ದೇವೀರ್, ಫ್ಲಾಟ್ ಒಳಗೆ ನೋಡಿ ಶಾಕ್ ಆದ್ರು. ಪಾಯಲ್ ಏನ್ ಮಹಿ ಮಿನಿ ಕಂಪನಿ ಓಪನ್ ಮಾಡಿದ್ದಿಯ, ಈ ಕಂಪನಿ ಹೆಸರೇನು ಅಂತ ಕೇಳಿದ್ಲು. ನಾನು ಫ್ರೆಂಡ್ಸ್ ಝೋನ್, ಅಂತ ಹೇಳ್ದೆ. ಪಾಯಲ್ ಒಳ್ಳೆ ನೇಮ್ ಅಂತ ಹೇಳಿ. ಫ್ಲಾಟ್ ಎಲ್ಲಾ ಓಡಾಡಿ ನೋಡಿ. ಮೋನಿಕಾ ವಾವ್ ಮಹಿ ಕಿಚನ್ ಇದೆ ಮಲಗೋಕೆ ಬೆಡ್ ರೂಮ್ ಇದೆ. ಕೂತ್ಕೋಳ್ಳೋಕೆ ಸೋಫಾ ಟೈಮ್ ಪಾಸ್ ಮಾಡೋಕೆ ಟಿವಿ.