ಅಧ್ಯಾಯ 25: ಕೃಷ್ಣ Vs ಕಾಳಿಂಗ

  • 45

ಹಳೆಯ ಥಿಯೇಟರ್, ಬೆಳಿಗ್ಗೆ 11:00 AMನಗರದ ಅತ್ಯಂತ ಹಳೆಯ ಮತ್ತು ದೊಡ್ಡದಾದ ಥಿಯೇಟರ್‌ನ ವೇದಿಕೆಯ ಮೇಲೆ, ಸೋಮೇಶ್ ಗುಪ್ತಾ ಪೊಲೀಸರ ವಶದಲ್ಲಿ ಕುಳಿತಿರುತ್ತಾನೆ. ಆತನ ಸುತ್ತಲೂ ACP ಕೃಷ್ಣನು ರವಿ ನೇತೃತ್ವದಲ್ಲಿ ತನ್ನ ತಂಡವನ್ನು ನಿಯೋಜಿಸಿರುತ್ತಾನೆ. ಕೃಷ್ಣನಿಗೆ ಈ ಥಿಯೇಟರ್‌ನಲ್ಲಿ ಗುಪ್ತ ಕ್ಯಾಮರಾಗಳು ಮತ್ತು ಪಪ್ಪೆಟಿಯರ್‌ನ ಸಾಧನಗಳಿವೆ ಎಂದು ತಿಳಿದಿರುತ್ತದೆ.ಕೃಷ್ಣ: (ಗಂಭೀರವಾಗಿ, ರವಿಗೆ) ರವಿ, ಜಾಗರೂಕರಾಗಿರಿ. ನಮ್ಮ ಸಂವಹನ ವ್ಯವಸ್ಥೆ ಯಾವುದೇ ಕ್ಷಣದಲ್ಲಿ ಸ್ಥಗಿತಗೊಳ್ಳಬಹುದು. ನಾನೇ ನಿಮಗೆ ಕೊನೆಯ ಸೂಚನೆ ನೀಡುತ್ತೇನೆ.ಸರಿಯಾಗಿ 11:00 ಗಂಟೆಗೆ, ಥಿಯೇಟರ್‌ನ ಎಲ್ಲಾ ಬೆಳಕು ಆಫ್ ಆಗಿ, ಒಂದು ಸ್ಪಾಟ್‌ಲೈಟ್ ಮಾತ್ರ ಗುಪ್ತಾನ ಮೇಲೆ ಬೀಳುತ್ತದೆ. ಥಿಯೇಟರ್‌ನ ಪರದೆಯ ಮೇಲೆ ದಿ ಪಪ್ಪೆಟಿಯರ್‌ನ (ನಗುವ ಮತ್ತು ಅಳುವ ಮುಖವಾಡ) ಆಕೃತಿ ಕಾಣಿಸಿಕೊಳ್ಳುತ್ತದೆ.ದಿ ಪಪ್ಪೆಟಿಯರ್: (ಧ್ವನಿ ಬದಲಾಯಿಸಿ, ಮಂದವಾಗಿ) ಸ್ವಾಗತ, ACP ಕೃಷ್ಣ!ಮತ್ತು ಸೋಮೇಶ್ ಗುಪ್ತಾ ಈ ಥಿಯೇಟರ್‌ನಲ್ಲಿ ನಮ್ಮಿಬ್ಬರ ಆಟದ ಕೊನೆಯ ಪ್ರದರ್ಶನ ನಡೆಯುತ್ತದೆ.ದಿ ಪಪ್ಪೆಟಿಯರ್ ಮಾತನಾಡುತ್ತಿದ್ದಂತೆಯೇ, ಕೃಷ್ಣನ ಕೈಯಲ್ಲಿನ ವಾಕಿ ಟಾಕಿಗಳು ಮತ್ತು ಎಲ್ಲ ಮೊಬೈಲ್