ಸಾರಿಕಾ ಲಗೇಜ್ ನ ಪ್ಯಾಕ್ ಮಾಡಿಕೊಂಡು, ಅಪ್ಪ ಅಮ್ಮನಿಗೆ ಹೇಳಿ, ಲಾಯರ್ ಕೊಟ್ಟ ಅಡ್ರೆಸ್ ಗೆ ಪ್ರಯಾಣ ಶುರು ಮಾಡ್ತಾಳೆ. ##### ಸೂಪರ್ ಮಾರ್ಕೆಟ್ ಅಲ್ಲಿ ಕೆಲಸ ಮಾಡೋವರಾನೆಲ್ಲ ಮಾತಾಡಬೇಕು ಅಂತ ಮೀಟಿಂಗ್ ಗೆ ಕರೀತಾರೆ. ಎಲ್ಲರೂ ಅವರವರ ಕೆಲಸ ನ ಬಿಟ್ಟು ಬರ್ತಾರೆ.ವಿಶ್ವ,,, ಎಲ್ಲರನ್ನು ನೋಡ್ತಾ,, ನಿಮಗೆ ಎಲ್ಲರಿಗೂ ಗೊತ್ತು, ಅಭಿ ನನ್ನ ಅಳಿಯ ಅಂತ, ಅಭಿ ಬಂದಮೇಲೆ ನನಗೆ ಹೆಚ್ಚಾಗಿ ಏನು ಕೆಲಸ ಇಲ್ಲಾ. ನೀವೆಲ್ಲಾ ನಿಮ್ಮ ಸ್ವಂತ ಸೂಪರ್ ಮಾರ್ಕೆಟ್ ಅನ್ನೋ ತರ ನೀವು ನೋಡ್ಕೋತ ಇದ್ದೀರಾ. ನನ್ನ ತನಕ ಯಾವುದೇ ಪ್ರಾಬ್ಲಮ್ ನ ಕೂಡ ತರ್ತಾ ಇಲ್ಲಾ. ಅದಕ್ಕೆ ನಿಮಗೆ ನಾನು ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿ ನೇ. ಅದಕ್ಕೆ ನಿಮಗೆಲ್ಲ ಈ ತಿಂಗಳಿನಿಂದ 1500 ನ ಜಾಸ್ತಿ ಮಾಡ್ತಾ ಇದ್ದೀನಿ. ಸಂಬಳ ಜಾಸ್ತಿ ಮಾಡಿದ್ರು ಅನ್ನೋ ಖುಷಿಗೆ ಎಲ್ಲರೂ ಚಪ್ಪಾಳೆ ಹೊಡೀತಾರೆ. ವಿಶ್ವ,,, ಇನ್ನೊಂದು ವಿಷಯ, ನಾನು ಈ ಸೂಪರ್ ಮಾರ್ಕೆಟ್ ನ ಅಭಿ ಕೈಗೆ ಒಪ್ಪಿಸ್ತಾ ಇದ್ದೀನಿ,