ಅತಿಯಾದ ಅಮೃತ

  • 168
  • 60

ಮಲೆನಾಡಿನ ದಟ್ಟ ಕಾಡಿನ ಅಂಚಿನಲ್ಲಿದ್ದ ಚೈತ್ರವನ ಎಂಬ ಪುಟ್ಟ ಹಳ್ಳಿ, ತನ್ನ ಅಪರೂಪದ ಗಿಡಮೂಲಿಕೆಗಳಿಗೆ ಹೆಸರುವಾಸಿಯಾಗಿತ್ತು. ಅಲ್ಲಿ ಜೀವಶಾಸ್ತ್ರಜ್ಞ ಡಾ. ಅರವಿಂದ್ ರಾವ್, ತಮ್ಮ ಮಗಳು ಅಕ್ಷರಾ ಜೊತೆ ವಾಸಿಸುತ್ತಿದ್ದರು. ಅರವಿಂದ್ ಅವರ ಕನಸು ಮಾನವನ ಆಯಸ್ಸನ್ನು ಹೆಚ್ಚಿಸುವ ಅಮೃತಸಮ ಔಷಧಿ ಕಂಡುಹಿಡಿಯುವುದು. ಅವರು ವರ್ಷಗಟ್ಟಲೆ ಸಂಶೋಧನೆಯಲ್ಲಿ ನಿರತರಾಗಿದ್ದರು. ಅಕ್ಷರಾ ಕೂಡ ತಂದೆಯಂತೆಯೇ ಬುದ್ಧಿವಂತೆ, ಆದರೆ ಅವಳು ಪರಿಸರ ಸಂರಕ್ಷಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಳು. ಒಂದು ದಿನ, ಅರವಿಂದ್ ರಾತ್ರಿವಿಡೀ ತಮ್ಮ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ರಾಸಾಯನಿಕ ಮಿಶ್ರಣವು ಬಣ್ಣ ಬದಲಾಯಿಸಿ ಹೊಳೆಯಲಾರಂಭಿಸಿತು. ಅವರು ತೀವ್ರ ಕುತೂಹಲದಿಂದ ಅದನ್ನು ಪರೀಕ್ಷಿಸಿದರು. ಪ್ರಾಥಮಿಕ ಪರೀಕ್ಷೆಗಳಲ್ಲಿ ಅದು ಜೀವಕೋಶಗಳ ಪುನರುತ್ಪತ್ತಿಯನ್ನು ಅದ್ಭುತವಾಗಿ ಉತ್ತೇಜಿಸುತ್ತದೆ ಎಂದು ಕಂಡುಬಂದಿತು. ಅಕ್ಷರಾ ನಾನು ಇದನ್ನು ಸಾಧಿಸಿದೆ ಎಂದು ಅವರು ಸಂತೋಷದಿಂದ ಕಿರಿಚಿದರು. ಅವರು ಅದಕ್ಕೆ ಆಯುಷಿ  ಎಂದು ಹೆಸರಿಟ್ಟರು. ಅರವಿಂದ್ ಅದನ್ನು ತಮ್ಮ ಮೇಲೆ ಪ್ರಯೋಗಿಸಿಕೊಂಡರು. ಕೆಲವೇ ದಿನಗಳಲ್ಲಿ, ಅವರ ಮುಖದಲ್ಲಿದ್ದ ಸುಕ್ಕುಗಳು ಮಾಯವಾದವು, ಅವರು