ಸುಭದ್ರ ವಿಶ್ವ ಹತ್ತಿರ, ರೀ ಪುರೋಹಿತರನ್ನ ಬರೋದಕ್ಕೆ ಹೇಳಿ.ವಿಶ್ವ,,,ಸುಭದ್ರ ನಿನ್ ಏನಕ್ಕೆ ಇದರ ಬಗ್ಗೆ ಇಷ್ಟು ಯೋಚ್ನೆ ಮಾಡ್ತಾ ಇದ್ದಿಯಾ. ಅವರೇನು ಏನು ತಿಳಿಯದೆ ಇರೋವ್ರು ಅಲ್ಲ ಅಲ್ವಾ. ಅವರ ಪಾಡಿಗೆ ಅವರನ್ನ ಬಿಟ್ಟು ಬಿಡು. ಸುಭದ್ರ,,, ಅದು ಆಗಲ್ಲಾ ರೀ, ಮದುವೆ ಏನೋ ಶಾಸ್ತ್ರ ಸಂಪ್ರದಾಯ ನೋಡದೆ ಮದುವೆ ಮಾಡಿದ್ವಿ. ಅದ್ರೆ ಈ ಕಾರ್ಯ ಆದ್ರು ಶಾಸ್ತ್ರ ಸಂಪ್ರದಾಯ ನೋಡಿ ಮಾಡೋಣ ಅಂತ. ಇಬ್ಬರು ಒಬ್ಬರನೊಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಂಡು ಸಂತೋಷ ವಾಗಿ ಇದ್ದಾರೆ. ಈಗ ನಾವು ಕೂಡ ಸುಮ್ನೆ ಇದ್ರೆ ತಪ್ಪಾಗುತ್ತೆ. ನೀವು ನನ್ನ ಮಾತು ಕೇಳಿ, ಪುರೋಹಿತರಿಗೆ ಬರೋಕೆ ಹೇಳಿ ಅಷ್ಟೇ. ವಿಶ್ವ,,, ಹ್ಮ್ ಸರಿ ನಿನ್ನಿಷ್ಟ, ನಿನ್ನ ಮಗಳು ಏನಾದ್ರೂ ಗಲಾಟೆ ಮಾಡಿದ್ರೆ ನನಗೆ ಗೊತ್ತಿಲ್ಲ, ಮೊದಲೇ ಹೇಳ್ತಾ ಇದ್ದೀನಿ.ಸುಭದ್ರ ಅದೆಲ್ಲಾ ನಾನ್ ನೋಡ್ಕೋತೀನಿ ನೀವು ಬರೋಕೆ ಹೇಳಿ. ****ಮಧ್ಯಾಹ್ನ ದ ಅಡುಗೆ ಮಾಡ್ತಾ ಇರೋವಾಗ ಸುಭದ್ರ,,, ನಯನಾ ನಿನಗೆ ಒಂದು ವಿಷಯ ಹೇಳಬೇಕು.ನಯನಾ,,, ಹೇಳಮ್ಮ ಅದಕ್ಕೆ ಯಾಕೆ